" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Wednesday, November 25, 2015

ಅಭಿನಂದನೆ .....

ನವಂಬರ್ 20 ರಂದು ತ್ರಿಕಾರಿಪುರ ದಲ್ಲಿ ನಡೆದ ಜಿಲ್ಲಾ ಮಟ್ಟದಲ್ಲಿ ನಡೆದ Sasthrolsavam ನ  Waste Materials Products  ಸ್ಪರ್ಧೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ  ಪಡೆದು  ಕೊಲ್ಲಂ ನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ "B" ಗ್ರೇಡ್  ಪಡೆದ ಕು.  ಶ್ರೀಪ್ರಿಯ. ಯಮ್ . ನಮ್ಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ.



ಶಾಲಾ ಯುವಜನೋತ್ಸವ 2015-16

ನಮ್ಮ ಶಾಲೆಯ ಯುವಜನೋತ್ಸವು ಅಕ್ಟೋಬರ್ ತಿಂಗಳ 12 ಮತ್ತು 13ನೇ ತಾರೀಕಿನಂದು ಜರಗಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶಾರದ ಎಡೆಕೊಡ್ಲುರವರು ಉದ್ಘಾಟಿಸಿದರು ಯುವಜನೋತ್ಸವದ ಸಂಚಾಲಕಿ  ಶ್ರೀಮತಿ ಜ್ಯೋತಿಲಕ್ಷ್ಮಿಯವರು ಸ್ವಾಗತಿಸಿದರು.   ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು  ಪ್ರದರ್ಶಿಸಿದರು.ಕೇರಳದ ಸುಪ್ರಸಿದ್ದ ನೃತ್ಯ ತಿರುವಾದಿರ ಎಲ್ಲರ ಮನ ಸೆಳೆಯಿತು. ನಂತರ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.




Sunday, October 18, 2015

ಶಾಲಾ ಮಟ್ಟದ ವಿವಿಧ ಮೇಳಗಳು

ಶಾಲಾ ಮಟ್ಟದ  ವಿವಿಧ  ಮೇಳಗಳು  ನಮ್ಮ ಶಾಲೆಯಲ್ಲಿ  ಅಕ್ಟೋಬರ್  7ರಂದು ಜರಗಿತು . ಮುಖ್ಯ ಶಿಕ್ಷಕಿ ಶಾರದ ಎಡೆಕೋಡ್ಲು ರವರು ಉದ್ಘಾಟಿಸಿದರು.







Thursday, October 8, 2015

ಗಾಂಧೀ ಜಯಂತಿ ಆಚರಣೆ

ಗಾಂಧೀಜಯಂತಿಯಂದು ನಮ್ಮ  ಶಾಲಾ ಮಕ್ಕಳು  ಶಾಲೆಯ  ಪರಿಸರವನ್ನು  ಶುಚಿಗೊಳಿಸಿದರು. ಸ್ವಚ್ಛ ಭಾರತ  ಅಭಿಯಾನಕ್ಕೆ ಶಾಲಾ ಮುಖ್ಯ  ಶಿಕ್ಷಕಿ  ಮಕ್ಕಳಿಗೆ  ಗಾಂಧೀ ಜಯಂತಿ ಆಚರಣೆಯ  ಮಹತ್ವವನ್ನು ತಿಳಿಸಿದರು. ಗಾಂಧೀಜಿಯವರ  ಆದರ್ಶ ಜೀವನವು  ನಮಗೆ  ಮಾದರಿಯಾಗಿದೆ . ಅವರ ಕನಸುಗಳನ್ನು ನನಸು ಮಾಡುವುದು  ನಮ್ಮೆಲ್ಲರ  ಕರ್ತವ್ಯವೆಂದು  ಮಕ್ಕಳಿಗೆ  ತಿಳಿಸಿದರು. ಗಾಂಧೀಜಯಂತಿಯ  ಅಂಗವಾಗಿ  ಮಕ್ಕಳಿಗೆ  ರಸಪ್ರಶ್ನೆಯನ್ನು  ಏರ್ಪಡಿಸಲಾಯಿತು.


Tuesday, August 25, 2015

ಓಣಂ ಹಬ್ಬದ ಸಂಭ್ರಮ

ನಮ್ಮ ಶಾಲೆಯಲ್ಲಿ  ಆಗೋಸ್ತು 21ರoದು ಓಣಂ ಹಬ್ಬವನ್ನು ಆಚರಿಸಲಾಯಿತು.ಹಬ್ಬದ ಪ್ರಯುಕ್ತ ಮಕ್ಕಳಿಗೆ ಹೂವಿನ ರಂಗೋಲಿ,ಓಣ೦ಪಾಟು,  ಸಂಗೀತ ಕುರ್ಚಿ,ಹಗ್ಗಜಗ್ಗಾಟ, ಸುಂದರಿಗೆ   ಬೊಟ್ಟು ಇಡುವ ಸ್ಪರ್ಧೆ,ಗೋಣಿ ಚೀಲ ಓಟ, ಸ್ಮರಣ ಶಕ್ತಿ ಸ್ಪರ್ಧೆ ನಡೆಸಲಾಯಿತು. ಹತ್ತನೇ ತರಗತಿಯ ಸುಧೀರ್ ಹಾಗೂ ವೈಶಾಖ್  ಸಿ .ಎಚ್ ಮಾವೇಲಿ, ವಾಮನನ ವೇಷ ಧರಿಸಿದರು .  ಆ ಬಳಿಕ ಓಣಂ ಹಬ್ಬ ದ ವಿಶೇಷ ಭೋಜನವನ್ನು ಮಕ್ಕಳು ಸವಿದರು . ಮುಖ್ಯೋಪಾಧ್ಯಾಯಿನಿ ಮಕ್ಕಳಿಗೆ ಓಣಂ ಹಬ್ಬದ  ಶುಭ ಹಾರೈಕೆ ನುಡಿದರು.   ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು  ಎಲ್ಲಾ ಅಧ್ಯಾಪಕ ವೃಂದ, ಸಿಬ್ಬಂಧಿ ವರ್ಗ ಹಾಗೂ  ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 





 ಮಕ್ಕಳು ರಚಿಸಿದ ಹೂ ರಂಗೋಲಿ 
ಮಾವೇಲಿ  ಹಾಗೂ  ವಾಮನ  

Tuesday, August 18, 2015

ಸ್ವಾತಂತ್ರ್ಯ ದಿನಾಚರಣೆ


ಎಡನೀರು ಸ್ವಾಮಿಜೀಸ್ ಹೈಯರ್ ಸೆಕೆಂಡರಿ ಯಲ್ಲಿ ನಡೆದ  69 ನೇ   ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಮ್ಮ ಶಾಲೆಯ ಪ್ರಾಂಶುಪಾಲರಾದ ಶ್ರೀ ನಾರಾಯಣ ಧ್ವಜಾರೋಹಣ ಮಾಡಿದರು .ಬಳಿಕ ನಡೆದ ಕಾರ್ಯಕ್ರಮದಲ್ಲಿ ಶಾಲಾಮಕ್ಕಳಿಗೆ ದೇಶಭಕ್ತಿ ಗೀತೆ ,ರಸಪ್ರಶ್ನೆ ,ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯು ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ ಬೆಳಸಿ ,ಹಿರಿಯರ ತ್ಯಾಗ ಬಲಿದಾನ,ರಾಷ್ಟ್ರ ಪ್ರೇಮ ವನ್ನು ನೆನಪಿಸುತ್ತದೆ , ಸ್ವಾತಂತ್ರ್ಯದ ಸಂದೇಶವನ್ನು ಉಳಿಸಿಕೊಂಡು ರಾಷ್ಟ್ರದ ಹಿತಾ ಸಕ್ತಿಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕು ಎಂದು ಮುಖ್ಯೋಪಾಧ್ಯಾಯಿನಿ ಶಾರದ ಅಡೆಕೊಡ್ಲು ರವರು  ಹೇಳಿದರು. ಆನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ  ಬಹುಮಾನ ವಿತರಿಸಲಾಯಿತು . ಶಾಲಾ ಅಧ್ಯಾಪಕರು,ವಿದ್ಯಾರ್ಥಿಗಳು ,ರಕ್ಷಕರು,ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು 

ಶಾಲಾ ಪಾರ್ಲಿಮೆಂಟ್ ರೂಪೀಕರಣ

                      

ನಮ್ಮ  ಶಾಲೆಯ 2015-2016ನೇ ಪಾರ್ಲಿಮೆಂಟ್  ರೂಪೀಕರಣವು  ಜರಗಿತು . ಪ್ರತಿಯೊoದು   ತರಗತಿ ಯ  ನಾಯಕ/ನಾಯಕಿ ಯನ್ನು  ಚುನಾವಣೆಯ  ಮೂಲಕ  ಆರಿಸಲಾಯಿತು.  ಆ  ಬಳಿಕ  ಶಾಲಾ ಮಕ್ಕಳ     ನಾಯಕ /ನಾಯಕಿ ಯನ್ನು   ಆಯ್ಕೆ ಮಾಡಲಾಯಿತು . ಶಾಲಾ ನಾಯಕ  ವೈಶಾಖ್.ಸಿ .ಯಚ್ ಹಾಗೂ   ಉಪನಾಯಕಿ  ಕು. ಶೆರಲ್ ಮೆರಿಯ  ಮಾಡ್ತ ಆಯ್ಕೆ ಗೊಂಡರು. ಸಮಾಜ ವಿಜ್ಞಾನ ಅಧ್ಯಾಪಕರಾದ ರಾಮಮೋಹನ್ ರವರು ನೇತೃತ್ವ ವಹಿಸಿದರು. ಎಲ್ಲಾ ಆಧ್ಯಾಪಕ ಅಧ್ಯಾ ಪಿಕೆಯರು ಉಪಸ್ಥಿತರಿದ್ದರು. 

Tuesday, July 14, 2015

ಶಾಲಾ ಕ್ಲಬ್ ಗಳ ಉದ್ಘಾಟನೆ




     ನಮ್ಮ ಶಾಲೆಯ ವಿದ್ಯಾರಂಗ  ಹಾಗೂ ಇತರ ಎಲ್ಲ ಕ್ಲಬ್ ಗಳ  ಉದ್ಘಾಟನೆ 10/07/2015 ರಂದು ನಡೆಯಿತು. ಶಾಲಾ ಮುಖ್ಯೋಪಾಧ್ಯಾಯಿನಿ  ಶಾರದಾ ಡೆಕೋಡ್ಲು ರವರು ಹಣತೆ ಬೆಳಗಿಸಿ ಉದ್ಘಾಟಿಸಿದರು 2015ನ್ನು ಅಂತರಾಷ್ಟ್ರೀಯ ಮಣ್ಣಿನ ವರ್ಷ ಹಾಗು ಬೆಳಕಿನ ವರ್ಷವಾಗಿ ಆಚರಿಸುವುದರ ಮಹತ್ವವನ್ನು ಅರಿಯಲು ವಿಶೇಷವಾಗಿ ಹಣತೆ ಬೆಳಗಿಸಿ  ಉದ್ಘಾಟಿಸಿದರು .
     ಮಕ್ಕಳು ತಯಾರಿಸಿದ ವಿಜ್ಞಾನ ಸಂಚಿಕೆಗಳನ್ನು ಮುಖ್ಯೋಪಾಧ್ಯಾಯಿನಿ ಶಾರದಾ ಅಡೆಕೋಡ್ಲುರವರು, ಸಂಸ್ಕೃತ ಅಧ್ಯಾಪಕ ಮಧುಸೂದನ,ವಿಜ್ಞಾನ ಅಧ್ಯಾಪಿಕೆ ಜ್ಯೋತಿಲಕ್ಷ್ಮಿ ,ಹಿಂದಿ  ಅಧ್ಯಾಪಿಕೆ ಶೀಮತಿ ಶೈಲಜಾ ರವರು ಬಿಡುಗಡೆ ಗೊಳಿಸಿದರು.ಮಕ್ಕಳಿಂದ ಸೆಮಿನಾರ್ ಮಂಡನೆ, ಪ್ರಯೋಗಗಳು ಮಣ್ಣಿನ ಸಂರಕ್ಷಣೆ ಬಗ್ಗೆ ಮಾಹಿತಿಯನ್ನೊಳಗೊಂಡ ಲೇಖನಗಳು,ಹಾಡು,ಕಿರುನಾಟಕ ಇತ್ಯಾದಿ ಜರಗಿತು. ಎಲ್ಲ ಶಿಕ್ಷಕ ಶಿಕ್ಷಕಿಯರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡರು. ವಿದ್ಯಾರ್ಥಿನಿ ಕು ಹರ್ಷಿತಾ ಸ್ವಾಗತಿಸಿ  ಕು.ಸುಶ್ಮಿತಾ ಧನ್ಯವಾದ ಹೇಳಿದಳು.  ಕು. ಶೆರಲ್ ಮರಿಯ ಮಾಡ್ತ  ಕಾರ್ಯಕ್ರಮವನ್ನು  ನಿರೂಪಿಸಿದಳು 

ಬಯೋಗ್ಯಾಸ್ ಪ್ಲಾಂಟ್ ಉದ್ಘಾಟನೆ


       ಕೇರಳ ರಾಜ್ಯ ಕೃಷಿ ಇಲಾಖೆ ಹಾಗೂ ಚೆಂಗಳ ಪಂಚಾಯತಿನ ಸಹಯೋಗದೊಂದಿಗೆ ನಮ್ಮ ಶಾಲೆಗೆ ಅಳವಡಿಸಿದ ಬಯೋಗ್ಯಾಸ್  ಪ್ಲಾಂಟ್ ನ ಉದ್ಘಾಟನೆಯನ್ನು ಚೆಂಗಳ ಗ್ರಾಮ ಪಂಚಾಯತ್ ವಿದ್ಯಾಭ್ಯಾಸ ಸ್ಥಾಯಿಸಮಿತಿಯ ಅಧ್ಯಕ್ಷರೂ,ಚೆಂಗಳ ಗ್ರಾಮ ಪಂಚಾಯತ್ ನ ಸದಸ್ಯರೂ ಆದ ಅಶ್ರಫ್ ರವರು ಉದ್ಘಾಟಿಸಿದರು. ಮುಖ್ಯ ಅತಿಥಿ ಯಾಗಿ ಚೆಂಗಳ ಕೃಷಿ ಭವನ ದ ಅಧಿಕಾರಿ ಶ್ರೀಮತಿ ಹೆನ್ನಾ ರವರು ಬಯೋಗ್ಯಾಸ್  ಪ್ಲಾಂಟ್ ನ ಬಗ್ಗೆ ಮಾಹಿತಿ ನೀಡಿದರು.
      ಶಾಲಾ ಮುಖ್ಯೋಪಾಧ್ಯಾ ಯಿನಿ  ಶೀಮತಿ ಶಾರದಾ ಎಡೆಕೋಡ್ಲು ರವರು ಅಧ್ಯಕ್ಷತೆ ವಹಿಸಿದರು.  ಶಾಲಾ ಅಧ್ಯಾಪಕ , ಸಿಬ್ಬಂಧಿ ವರ್ಗ  ಹಾಗೂ  ವಿದ್ಯಾರ್ಥಿಗಳು ಉಪಸ್ಥಿತರಿದ್ದರು. NSS ನ ಪ್ರಧಾನ ಕಾರ್ಯದರ್ಶಿ ಹಾಗೂ ಹೈಯರ್ ಸೆಕೆಂಡರಿ ಅಧ್ಯಾಪಕರಾದ ವಾಸುದೇವ ಉಪಸ್ಥಿತರಿದ್ದರು. ಅಧ್ಯಾಪಕರಾದ ಮಧುಸೂದನ ರವರು ಸ್ವಾಗತಿಸಿ ಹಿರಿಯ ಅಧ್ಯಾ ಪಿಕೆ ಶಾಂತ ಕುಮಾರಿ ಯವರು ವಂದಿಸಿದರು . 



Thursday, July 2, 2015

ವಿಶ್ವ ಮಾದಕ ವಸ್ತು ನಿಷೇಧ ದಿನಾಚರಣೆಯಲ್ಲಿ ನಮ್ಮ ಮಕ್ಕಳು


ನಮ್ಮ  ಶಾಲೆಯಲ್ಲಿ ವಿಶ್ವ ಮಾದಕ ವಸ್ತು ನಿಷೇಧ  ದಿನಾಚರಣೆಯನ್ನು ಧರ್ಮಸ್ಥ ಳ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕಜನ ಜಾಗೃತಿ  ವೇದಿಕೆ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ   ವಿವಿಧ  ಕಾರ್ಯಕ್ರಮಗ ಳೊoದಿಗೆ ನಡೆಸಲಾಯಿತು . 
ಇದರ ಅoಗವಾಗಿ ವಿದ್ಯಾರ್ಥಿಗಳ  ಮೆರವಣಿಗೆ ನಡೆಯಿತು . ಬಳಿಕ  ನಡೆದ ಜನ ಜಾಗೃತಿ  ಸಭೆ ಯನ್ನು ಜನ ಜಾಗೃತಿ  ಸಭೆಯ ಉಪಾದ್ಯಕ್ಷ  ಬಾಲಕೃಷ್ಣ  ವೊರ್ಕೊಡ್ಲುರವರು ಉದ್ಘಾಟಿಸಿದರು  ,ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಎಡಕೊಡ್ಲು ,ಧರ್ಮಸ್ಥ ಳ ಕ್ಷೇತ್ರ ಗ್ರಾಮಾಭಿವೃದ್ಹಿ ಯೋಜನೆಯ ಮೇಲ್ವಿಚಾರಕಿ  ಸವಿತಾ . ಎ. ಶೆಟ್ಟಿ , ಸೇವಾ ಪ್ರತಿನಿಧಿಗಳು ,ಸ್ವಸಹಾಯ  ಸಂಘದ ಸದಸ್ಯೆಯರು ಉಪಸ್ಥಿತರಿದ್ದರು . ಹಿರಿಯ ಅಧ್ಯಾಪಿಕೆ  ಶಾಂತಕುಮಾರಿಯವರು  ಮಕ್ಕಳಿಗೆ ಪ್ರತಿಜ್ಞೆ  ಬೋಧಿಸಿದರು.
ಮಕ್ಕಳು ಮಾದಕ ವ್ಯಸನದ ವಿರೋಧಿ ದಿನದ ಬಗ್ಗೆ ಭಾಷಣ ಮತ್ತು ಮಾದಕ  ವ್ಯಸನದ  ಪರಿಣಾಮದ ಬಗ್ಗೆ  ಕಿರು ನಾಟಕವನ್ನು ಪ್ರದರ್ಶಿಸಿದರು. ಅಧ್ಯಾಪಕರು , ವಿಧ್ಯಾರ್ಥಿಗಳು  ಭಾಗವಹಿಸಿದರು .




Friday, June 26, 2015

ರಕ್ಷಕ -ಶಿಕ್ಷಕ ಸಂಘ (P.T.A) ದ ಸಭೆ

16-06-2015 ನೇ  ಮ೦ಗಳವಾರದoದು ನಮ್ಮ ಶಾಲಾ ರಕ್ಷಕ -ಶಿಕ್ಷಕ ಸಂಘ (P.T.A) ದ ಈ ಸಾಲಿನ ಮೊದಲ ಸಭೆ ಜರಗಿತು. ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲೂ  A+ ಪಡೆದ  ಕು.ಹರ್ಷ ಹಾಗೂ ಒoಭತ್ತು  ವಿಷಯಗಳಲ್ಲಿ A+ ಪಡೆದ  ವಿಶಾಖ್  ಇವರನ್ನು  ಶಾಲಾವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.. ಈ  ವರ್ಷದ ಶಾಲಾ ರಕ್ಷಕ -ಶಿಕ್ಷಕ ಸಂಘದ  ಅಧ್ಯಕ್ಷರಾಗಿ ಮಹಾಲಿಂಗ ಪಾಠಾಳಿ  ಹಾಗೂ ಮಾತೃ ಸಂಘದ ಅಧ್ಯಕ್ಷರಾಗಿ ಶ್ರೀಮತಿ ಸರೋಜ ಎಸ್ . ಭಟ್  ರನ್ನು ಆಯ್ಕೆ ಮಾಡಲಾಯಿತು. ಹನ್ನೆರಡು ಸದಸ್ಯರನ್ನು ಒಳಗೊಂಡ ಒಂದು ಸಮಿತಿಯನ್ನು ರೋಪೀಕರಿಸಲಾಯಿತು.  ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಎಡಕೊಡ್ಲುರವರು ಕಾರ್ಯಕ್ರಮಕ್ಕೆ ಸ್ವಾಗತಕೋರಿದರು ಹಾಗೂ ಅಧ್ಯಾಪಕರಾದ ವೆಂಕಟಕೃಷ್ಣ ರವರು  ಧನ್ಯವಾದವನ್ನು ಅರ್ಪಿಸಿದರು.

.

Sunday, June 14, 2015

ವಿಶ್ವ ಪರಿಸರ ದಿನಾಚರಣೆ ಜೂನ್ 5

ವಿಶ್ವ ಪರಿಸರ ದಿನಾಚರಣೆಯನ್ನು ಜೂನ್ 5ರಂದು ನಮ್ಮ ಶಾಲೆಯಲ್ಲಿ ಆಚರಿಸಲಾಯಿತು ...ಹಿರಿಯ ಶಿಕ್ಷಕರಾದ  ಮಧುಸೂದನ ರವರು  ಮಕ್ಕಳಿಗೆ ವಿಶ್ವ ಪರಿಸರದ ಪ್ರತಿಜ್ಞೆ ಯನ್ನು ಬೋಧಿಸಿದರು. ಶಾಲಾ ನಾಯಕಿ ಕು.ಶೆರಲ್  ಮರಿಯ ಮಾಡ್ತಾ 'ಪರಿಸರದ  ಸಂರಕ್ಷಣೆ ಯಲ್ಲಿ  ಮಕ್ಕಳ ಪಾತ್ರ ' ದ ಬಗ್ಗೆ   ಲೇಖನ ಮಂಡಿಸಿದಳು . ಮಕ್ಕಳಿಗೆ ಗಿಡ ವನ್ನು ವಿತರಿಸಿದರು .. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಎಡಕೊಡ್ಲು ರವರು ನಮ್ಮ ಅಸ್ತಿತ್ವ ದಲ್ಲಿ ಪರಿಸರ ಹೇಗೆ ಪ್ರಭಾವ ಬೀರಿದೆ ಎಂದೂ  ಮಕ್ಕಳು ಹೇಗೆ ಪರಿಸರವನ್ನು ಶುಚಿ ಯಾಗಿರಿಸಬೇಕೆ೦ದು  ತಿಳಿಸಿದರು ...

ಪ್ರವೇಶೋತ್ಸವ 2015-16

ನಮ್ಮ ಶಾಲಾ ಪ್ರವೇಶೋತ್ಸವವು  ಜೂನ್ 1ನೇ ತಾರೀಕಿನಂದು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಎಡಕೊಡ್ಲು ರವರ ನೇತೃತ್ವದಲ್ಲಿ ಜರಗಿತು. ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾದ ಬಾಲಕೃಷ್ಣ ವೊರ್ಕೊಡ್ಲು ಮಕ್ಕಳಿಗೆ ಶುಭ ಹಾರೈಕೆ ಮಾಡಿದರು.ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಎಡಕೊಡ್ಲು ರವರು ಹಿತವಚನ ನುಡಿದು ಸ್ವಾಗತಿಸಿದರು.




Thursday, February 12, 2015

ಎ ಸ್ಸಿ ಮಕ್ಕಳಿಗೆ ಮೇಜು ಹಾಗೂ ಕುರ್ಚಿ ವಿತರಣೆ ......

10-02-2015 ನೇ ಮಂಗಳವಾರ ನಮ್ಮ ಗ್ರಾಮ ಪಂಚಾಯತ್ ವತಿಯಿಂದ ಶಾಲೆಯ 8,9 ಹಾಗೂ 10ನೇ  ತರಗತಿಯಲ್ಲಿ ಕಲಿಯುತ್ತಿರುವ  36  ಎಸ್ಸಿ (SC) ಮಕ್ಕಳಿಗೆ ಮೇಜು ಹಾಗೂ ಕುರ್ಚಿಯನ್ನು ವಿತರಿಸಲಾಯಿತು ...ಮೊದಲು ನಡೆದ ಸಭೆಯಲ್ಲಿ ಹಿರಿಯ ಅಧ್ಯಾಪಿಕೆ ಶಾಂತ ಕುಮಾರಿ ಟೀಚರ್  ಎಲ್ಲರನ್ನು ಸ್ವಾಗತಿಸಿದರು. ಶಾಲಾ ಮುಖ್ಯಶಿಕ್ಸಕಿಯವರು ಪಂಚಾಯತ್ ನ ಈ ಯೋಜನೆಯನ್ನು ಶ್ಲಾಘಿಸಿದರು..ಸಭೆಯಲ್ಲಿ ಶಾಲಾ ಪಿ .ಟಿ .ಎ  ಅಧ್ಯಕ್ಷರು ,ಎಸ್. ಅರ್ . ಜಿ ಸಂಚಾಲಕರು ,ಎಲ್ಲಾ ಶಿಕ್ಷಕರು, ಸಿಬ್ಬಂಧಿವರ್ಗ, ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು ... 





"ಪರಿಸರದಲ್ಲಿ ಮರ ಗಿಡಗಳ ಹಾಗೂ ಪ್ರಾಣಿ ಪಕ್ಷಿ ಗಳ ಮಹತ್ವ"

10-02-2015 ನೇ  ಮಂಗಳವಾರ  ಕೇರಳ ಅರಣ್ಯ ಹಾಗೂ ವನ್ಯಮೃಗ ಸಂರಕ್ಷಣಾ  ಇಲಾಖೆಯ ವತಿಯಿಂದ " ಪರಿಸರದಲ್ಲಿ ಮರ ಗಿಡಗಳ ಹಾಗೂ ಪ್ರಾಣಿ ಪಕ್ಷಿ ಗಳ ಮಹತ್ವ" ಎಂಬ ವಿಷಯದ ಕುರಿತು ಮಕ್ಕಳಿಗೆ  ವಿಚಾರ ಗೋಷ್ಠಿ ಯನ್ನು ಹಮ್ಮಿ ಕೊಳ್ಳಲಾಯಿತು... ಈ  ವಿಚಾರ ಗೋಷ್ಠಿಯಲ್ಲಿ  ಜಿಲ್ಲಾ ಅರಣ್ಯಾಧಿಕಾರಿ ಶ್ರೀ ಮುರಳೀಧರನ್ ರವರು ಹಾಜರಿದ್ದು ,ಸಂಪನ್ಮೂಲ ವ್ಯಕ್ತಿ ಶ್ರೀ ಭಾಸ್ಕರ ಬೆಳ್ಳೂರು ರವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು..





Tuesday, January 20, 2015


20-01-2015 : -ರಾಜ್ಯ ದಲ್ಲಿ ನಡಯುವ ರಾಷ್ಟ್ರೀಯ  ಕ್ರೀಡಾ ಕೂಟಕ್ಕೆ  ಉತ್ತೇಜನ ಸಂದೇಶ  ಹಾಗೂ ಪ್ರಚಾರ  ನೀಡುವ ಉದ್ದೇಶದಿಂದ ನಮ್ಮ ಶಾಲಾ ಮಕ್ಕಳು ಇಂದು  ಬೆಳಗ್ಗೆ "ರನ್ -ಕೇರಳ -ರನ್ " ಸಾಮೂಹಿಕ ಓಟದಲ್ಲಿ ಭಾಗವಹಿಸಿದರು. 




Thursday, January 15, 2015

ಸ್ವಾಮಿ ವಿವೇಕಾನಂದರವರ 152ನೇ ಜನ್ಮದಿನೋತ್ಸವ ಆಚರಣೆ

ಸ್ವಾಮಿ ವಿವೇಕಾನಂದ ರವರ 152ನೇ ಜನ್ಮ ದಿನೋತ್ಸವವನ್ನು ನಮ್ಮ ಶಾಲಾ ಸಮಾಜವಿಜ್ಞಾನ ಕ್ಲಬ್ ನ ನೇತೃತ್ವ ದಲ್ಲಿ ನಡೆಸಲಾಯಿತು. ನಮ್ಮ ಶಾಲಾ  ಮುಖ್ಯ ಶಿಕ್ಷಕಿಯವರು  ಸ್ವಾಮಿ ವಿವೇಕಾನಂದ ರವರ" ಉತ್ತಮನಾಗು..  ಉಪಕಾರಿಯಾಗು " ಎಂಬ ವಿಚಾರವನ್ನು ತಮ್ಮಭಾಷಣ ದಲ್ಲಿ  ಹೇಳುವ   ಮೂಲಕ  ಮಕ್ಕಳಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯ ಪರಿಕಲ್ಪನೆ ಯನ್ನು ಮೂಡಿಸಿದರು . ನಂತರ ಚಕ್ರವರ್ತಿ ಸೂಲಿಬೆಲೆ ಯವರ "ಜಾಗೋ ಭಾರತ್ "ನ  ವೀಡಿಯೋ ಪ್ರದರ್ಶಿಸಲಾಯಿತು... ಮಕ್ಕಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು ...