" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Tuesday, July 14, 2015

ಬಯೋಗ್ಯಾಸ್ ಪ್ಲಾಂಟ್ ಉದ್ಘಾಟನೆ


       ಕೇರಳ ರಾಜ್ಯ ಕೃಷಿ ಇಲಾಖೆ ಹಾಗೂ ಚೆಂಗಳ ಪಂಚಾಯತಿನ ಸಹಯೋಗದೊಂದಿಗೆ ನಮ್ಮ ಶಾಲೆಗೆ ಅಳವಡಿಸಿದ ಬಯೋಗ್ಯಾಸ್  ಪ್ಲಾಂಟ್ ನ ಉದ್ಘಾಟನೆಯನ್ನು ಚೆಂಗಳ ಗ್ರಾಮ ಪಂಚಾಯತ್ ವಿದ್ಯಾಭ್ಯಾಸ ಸ್ಥಾಯಿಸಮಿತಿಯ ಅಧ್ಯಕ್ಷರೂ,ಚೆಂಗಳ ಗ್ರಾಮ ಪಂಚಾಯತ್ ನ ಸದಸ್ಯರೂ ಆದ ಅಶ್ರಫ್ ರವರು ಉದ್ಘಾಟಿಸಿದರು. ಮುಖ್ಯ ಅತಿಥಿ ಯಾಗಿ ಚೆಂಗಳ ಕೃಷಿ ಭವನ ದ ಅಧಿಕಾರಿ ಶ್ರೀಮತಿ ಹೆನ್ನಾ ರವರು ಬಯೋಗ್ಯಾಸ್  ಪ್ಲಾಂಟ್ ನ ಬಗ್ಗೆ ಮಾಹಿತಿ ನೀಡಿದರು.
      ಶಾಲಾ ಮುಖ್ಯೋಪಾಧ್ಯಾ ಯಿನಿ  ಶೀಮತಿ ಶಾರದಾ ಎಡೆಕೋಡ್ಲು ರವರು ಅಧ್ಯಕ್ಷತೆ ವಹಿಸಿದರು.  ಶಾಲಾ ಅಧ್ಯಾಪಕ , ಸಿಬ್ಬಂಧಿ ವರ್ಗ  ಹಾಗೂ  ವಿದ್ಯಾರ್ಥಿಗಳು ಉಪಸ್ಥಿತರಿದ್ದರು. NSS ನ ಪ್ರಧಾನ ಕಾರ್ಯದರ್ಶಿ ಹಾಗೂ ಹೈಯರ್ ಸೆಕೆಂಡರಿ ಅಧ್ಯಾಪಕರಾದ ವಾಸುದೇವ ಉಪಸ್ಥಿತರಿದ್ದರು. ಅಧ್ಯಾಪಕರಾದ ಮಧುಸೂದನ ರವರು ಸ್ವಾಗತಿಸಿ ಹಿರಿಯ ಅಧ್ಯಾ ಪಿಕೆ ಶಾಂತ ಕುಮಾರಿ ಯವರು ವಂದಿಸಿದರು . No comments:

Post a Comment