ಎಡನೀರು:ಸ್ವಾಮೀಜೀಸ್ ಹೈಯರ್
ಸೆಕೆಂಡರಿ ಶಾಲೆಯಲ್ಲಿ ತಾರೀಕು 04-08-2018 ರಂದು ಲಿಟ್ಲ್
ಕೈಟ್ಸ್ ನ ಶಾಲಾ ಮಟ್ಟದ ಶಿಬಿರವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ
ಶಾರದಾ ಅಡೆಕೋಡ್ಲುರವರು ಉದ್ಘಾಟಿಸಿದರು.ಒಟ್ಟಾಗಿ 21 ವಿದ್ಯಾರ್ಥಿಗಳು ಈ
ಶಿಬಿರದಲ್ಲಿ ಪಾಲ್ಗೊಂಡಿದ್ದರು.ಭಾರತಿ ಟೀಚರ್ ಹಾಗೂ ರಾಮಮೋಹನ ಕೆದಿಲ್ಲಾಯರು ಈ
ಶಿಬಿರದ ಸಂಪೂರ್ಣ ನೇತೃತ್ವವನ್ನು ವಹಿಸಿದ್ದರು.ಈ ಶಿಬಿರದಲ್ಲಿ ಭಾರತಿ ಟೀಚರ್ ರವರು ಒಂದು
ಎನಿಮೇಶನ್ ವೀಡಿಯೋವನ್ನು ಹೇಗೆ ಎಡಿಟ್ ಮಾಡಬಹುದು ಎಂದು ತಿಳಿಸಿಕೊಟ್ಟರು.ಮಾತ್ರವಲ್ಲದೇ ವೀಡಿಯೋಗೆ
ಹೇಗೆ ಧ್ವನಿಯನ್ನು ಸೇರಿಸಬಹುದೆಂದುತಿಳಿಸಿದರು.
ಸರಿಸುಮಾರು
11.00 ಗಂಟೆಗೆ
ಲಘು ಉಪಹಾರವನ್ನು ವಿತರಿಸಿದರು.ತದನಂತರ ಲಿಟ್ಲ್ ಕೈಟ್ಸ್ ನ ಉಳಿದ ಚಟುವಟಿಕೆಗಳನ್ನು ಮಾಡಲಾಯಿತು. ಭೋಜನವು ರುಚಿಕರವಾಗಿತ್ತು.ಭೋಜನದನಂತರ ಭಾರತಿ ಟೀಚರವರು ಲಿಟ್ಲ್ ಕೈಟ್ಸ್ ನ ಬಾಕಿ ಉಳಿದ ಚಟುವಟಿಕೆಗಳನ್ನು ಪ್ರಾರಂಭಿಸಿದರು.ಮಧ್ಯಾಹ್ನದ ನಂತರ ಓಪನ್ ಶೋಟ್ ವೀಡಿಯೋ ಎಡಿಟರ್ ಎಂಬ ಸೋಫ್ಟ್ ವೇರ್ ನಲ್ಲಿ ತಯಾರಿಸಿದ ಒಂದು ಎನಿಮೇಶನ್ ವೀಡಿಯೋಗೆ
ಶೀರ್ಷಿಕೆ ನೀಡಲಾಯಿತು.ಪ್ರತಿಯೋರ್ವ ವಿದ್ಯಾರ್ಥಿಯೂ ಸಹ ತಮ್ಮ ತಮ್ಮ ಎನಿಮೇಶನ್ ವೀಡಿಯೋಗೆ ಶೀರ್ಷಿಕೆಯನ್ನು ನೀಡಿದರು.ತದನಂತರ ಎನಿಮೇಶನ್ ವೀಡಿಯೋವನ್ನು ಎಕ್ಸ್ ಪೋರ್ಟ್ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. ವೀಡಿಯೋವನ್ನು ಎಕ್ಸ್ ಪೋರ್ಟ್ ಮಾಡುವುದರೊಂದಿಗೆ ಲಿಟ್ಲ್ ಕೈಟ್ಸ್ ನ ಶಾಲಾ ಮಟ್ಟದ ಶಿಬಿರವು ಮುಕ್ತಾಯಗೊಂಡಿತು.ಕೊನೆಯಲ್ಲಿ ಕೆಲವು ವಿದ್ಯಾರ್ಥಿಗಳು ಈ ಶಿಬಿರದ ಕುರಿತಾದ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.ಸಂಜೆಯೂ ಸಹ ವಿದ್ಯಾರ್ಥಿಗಳಿಗೆ ಲಘು
ಉಪಹಾರವನ್ನು ವಿತರಿಸಲಾಯಿತು.
ಒಟ್ಟಿನಲ್ಲಿ
ಈ ಶಿಬಿರದಿಂದ ಹಲವಾರು ಸೋಫ್ಟ್ ವೇರ್ ಗಳನ್ನು ಪರಿಚಯಿಸಲು ಸಾಧ್ಯವಾಗಿದೆ.ಮಾತ್ರವಲ್ಲದೇ ಒಂದು ವೀಡಿಯೋವನ್ನು ಯಾವ ರೀತಿಯಲ್ಲಿ ಎಡಿಟ್ ಮಾಡಬಹುದು,ಯಾವ ರೀತಿಯಲ್ಲಿ ಆ ವೀಡಿಯೋಗೆ ಶಬ್ದವನ್ನು ನೀಡಬಹುದು ಎಂಬುದನ್ನು ತಿಳಿಯಲು ಸಾಧ್ಯವಾಗಿದೆ.ಇದಲ್ಲದೇ ಪ್ರತಿಯೊಂದು ಸೋಫ್ಟ್ ವೇರ್
ನಲ್ಲಿರುವ ವಿವಿಧ ರೀತಿಯ ಟೂಲುಗಳನ್ನು
ಪರಿಚಯಿಸಿಕೊಳ್ಳಲು ಈ ಶಿಬಿರವು
ಸಹಾಯಕವಾಗಿದೆ.