" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Monday, December 1, 2014

ಇರಿಯಣ್ಣಿಯಲ್ಲಿ ಜರುಗಿದ ಕಾಸರಗೋಡು ಉಪಜಿಲ್ಲಾ ವಿದ್ಯಾರಂಗ ಸಾಹಿತ್ಯೋತ್ಸವ ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮುಖ್ಯಶಿಕ್ಷಕಿಯವರೊಂದಿಗೆ ....


Monday, October 20, 2014

2014-15 ನೇ ಸಾಲಿನ ಶಾಲಾಯುವಜನೋತ್ಸವವು ಅಕ್ಟೋಬರ್ 20,21 ರಂದು ಯಶಸ್ವಿಯಾಗಿ ಜರುಗಿತು. ಶಾಲಾ ಮುಖ್ಯ ಶಿಕ್ಷಕಿ ,ಶ್ರೀಮತಿ ಶಾರದ ಅಡೆಕ್ಕೊಡ್ಲು ರವರು ಉದ್ಘಾಟನಾ ಭಾಷಣ ಮಾಡಿದರು. ಎರಡು ದಿವಸಗಳ ವಿದ್ಯಾರ್ಥಿ ,ವಿದ್ಯಾರ್ಥಿನಿಯರ  ಸಾಂಸ್ಕೃತಿಕ ಕಲಾ ಪ್ರದರ್ಶನ ಜನಮನ ಸೆಳೆ ಯಿತು . 


                                       






ಎಡನೀರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿಯೋಜನೆಯ ಸ್ವಾಸ್ಥ ಸಂಕಲ್ಪ ಹಾಗೂ ಪರಿಸರ ಜಾಗ್ರತಿ ಅಭಿಯಾನದ ಕಾರ್ಯಕ್ರಮವು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ 14.10.14 ರಂದು ಜರಗಿತು.ಸಭೆಯಅಧ್ಯಕ್ಷತೆಯನ್ನು
ಶಾಲಾಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಶಾರದ ಅಡೆಕ್ಕೊಡ್ಲು ಇವರು ವಹಿಸಿದರು. ಗ್ರಾಮಾಭಿವೃದ್ಧಯೋಜನೆಯ ಕಾಸರಗೋಡು ವಿಭಾಗದ ಸಂಯೋಜಿಕರಾದ ಶ್ರೀಮತಿ ಶಿವಲಕ್ಮಿ ಇವರು ಶ್ರೀ ಕ್ಷೇತ್ರದ ವಿವಿಧ ಯೋಜನೆಗಳನ್ನು ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದರು. ಸಂಪನ್ಮೂಲವ್ಯಕ್ತಿಗಳಾದ ರಾಜನ್ ಮುಳಿಯಾರು ಇವರು ಮಧ್ಯಪಾನ ಕೆಡುಕುಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಗಳನ್ನು ನೀಡಿದರು. ಹಿರಿಯ ಅಧ್ಯಾಪಿಕೆಯಾದ ಶಾಂತ ಕುಮಾರಿ ಟೀಚರ್ ಸ್ವಾಗತಿಸಿದರು. ಅದ್ಯಾಪಕರಾದ ವೆಂಕಟಕೃಷ್ಣ ಇವರು ಧನ್ಯವಾದವನ್ನು ಸಮರ್ಪಿಸಿದರು. ಅಭಿವೃದ್ಧಿ ಯೋಜನೆಯ ಎಡನೀರು ಘಟಕದ ರಾಜೀವಿಯವರು ಸಭೆಯಲ್ಲಿ ಪಾಲ್ಗೊಂಡರು.

Friday, October 17, 2014

School level science,maths,social science, & IT.Fair

Inauguration of science magazine&maths magazine

Our school former principal Rajendra Kalluraya visited to our school fairs
IT multimedia competition

Friday, October 10, 2014

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಕ್ಕಳ ಪರಿಸರ ಕಾಳಜಿಯನ್ನು ಗುರುತಿಸುವ ಸಲುವಾಗಿ ಶಾಲಾ ಪ್ರಾಥಮಿಕ ಮಟ್ಟದಲ್ಲಿ ಹಲವು ಸ್ಪರ್ಧೆ ಗಳನ್ನು ಏರ್ಪಡಿಸಲಾಗಿತ್ತು .... ಮಕ್ಕಳಿಗೋಸ್ಕರ ಪರಿಸರಗೀತೆ ,ಪರಿಸರ ಸಂಬಂಧಿತ ಪ್ರಬಂಧ ,ಹಾಗೂ ಪ್ರಕೃತಿ ಗೆ ಸಂಬಂಧಪಟ್ಟಂತೆ ನೆನಪಿನಶಕ್ತಿ ಪರೀಕ್ಷಿಸುವ  ಸ್ಪರ್ಧೆಯನ್ನೂ ಶಾಲಾ ವತಿಯಿಂದ ನಡೆಸಲಾಯಿತು .......




conducting memory test through leaves.....



Standard Ten Enrichment Programme held on 10-10-2014

ನಮ್ಮ ಶಾಲಾ ಹತ್ತನೇ ತರಗತಿಯ ಮಕ್ಕಳಿಗಾಗಿ ನಡೆಸಿದ " ಮೋಟಿವೇಷನ್" ತರಗತಿಯನ್ನು ದಿನಾoಕ 10/10/14 ರಂದು ನಡೆಸಲಾಯಿತು. ಬೆಳಗ್ಗಿನಿಂದ ಮಧ್ಯಾಹ್ನದ ತನಕ ವಿವಿಧ ವಿಷಯಗಳ ಕುರಿತು ನುರಿತ  ಅದ್ಯಾಪಿಕೆಯರಾದ  ಶ್ರೀಮತಿ ಶಾOತಾಕುಮಾರಿ ( H.S.A., G.H.S.S. Kumbla), ಹಾಗೂ ಶ್ರೀಮತಿ ವಸಂತಿ (H.S.A.,G.H.S.S.Chandragiri) ನಡೆಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯಿನಿಯರಾದ  ಶ್ರೀಮತಿ ಶಾರದಾ ಎ, ಸ್ವಾಗತಿಸಿ , ಕ್ಲಾಸ್ ಶಿಕ್ಷಕಿಯರಲ್ಲಿ  ಒಬ್ಬರಾದ  ಶ್ರೀಮತಿ  ಜ್ಯೋತಿಲಕ್ಷ್ಮೀ ಯವರು ವಂದಿಸಿದರು.


                                      


Tuesday, October 7, 2014

ವನ್ಯಜೀವಿ ವಾರಾಚರಣೆ ಅಂಗವಾಗಿಒಕ್ಟೋಬರ್ ತಿಂಗಳ  ೧,೩ನೇ ತಾರೀಕಿನಂದು   ಕಾಸರಗೋಡು ಆರಣ್ಯ ಇಲಾಖೆಯವರು ಏರ್ಪಡಿಸಿದ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಮಕ್ಕಳ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ನಮ್ಮ ಶಾಲೆಯ ಹತ್ತನೇ ತರಗತಿಯ ವಿಧ್ಯಾರ್ಥಿನಿ ಅನಘಾ . ಎ 

Saturday, October 4, 2014

                                    ಶಾರದಾ ಪೂಜೆ 
ನಮ್ಮ ಶಾಲೆಯಲ್ಲಿ ಅಕ್ಟೋಬರ್ ೩ನೇ ತಾರೀಕು ಶುಕ್ರವಾರ ಶಾರದಾ ಪೂಜೆ ಜರಗಿತು . ಮಕ್ಕಳು ಹಾಗೂ ಅಧ್ಯಾಪಕ ,ಸಿಬ್ಬಂಧಿ ವರ್ಗದವರು  ಭಜನೆಯಲ್ಲಿ ಪಾಲ್ಗೊಂಡರು
ಗಾಂಧಿ ಜಯಂತಿ ಆಚರಣೆ  
 

 ಅಕ್ಟೋಬರ್ ೨ನೇ ತಾರೀಕು ಗುರುವಾರ ನಮ್ಮ ಶಾಲೆಯಲ್ಲಿ  ಗಾಂಧೀಜಯಂತಿ ಆಚರಿಸಲಾಯಿತು. ಶಾಲಾ ಅಸ್ಸೆಂಬ್ಲಿಯಲ್ಲಿ ಮುಖ್ಯ ಶಿಕ್ಷಕಿಯವರು  ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು ಗಾಂಧೀಜಿಯವರ ಆದರ್ಶಜೀವನದ ಕಿರುಪರಿಚಯವನ್ನು  ಮಕ್ಕಳಿಗೆ ನೀಡಿದರು .ಬಳಿಕ ರಕ್ಷಕ-ಶಿಕ್ಷಕ ಸಂಘದ ಅದ್ಯಕ್ಷರಾದ ವಿಷ್ಣುಮೂರ್ತಿ ಕಕ್ಕಿಲ್ಲಾಯರು ಈ ದಿನದ ಮಹತ್ವವನ್ನು ವಿವರಿಸಿದರು.ಅಧ್ಯಾಪಕರಾದ ಮಧುಸೂಧನನ್ ರವರು ಸ್ವಚ್ಚತಾಪ್ರತಿಜ್ಞೆಯನ್ನು ಬೋಧಿಸಿದರು,ನಂತರ ಮಕ್ಕಳು ಶಾಲಾ ಪರಿಸರವನ್ನು ಅಧ್ಯಾಪಕರ ಸಹಕಾರದೊಂದಿಗೆ  ಶುಚಿಗೊಳಿಸಿದರು ......  



ಮಕ್ಕಳು ಶಾಲಾ ಪರಿಸರ ವನ್ನು ಸ್ವಚ್ಛಗೊಳಿಸಿದರು 


Thursday, October 2, 2014


30/09/2014 ನೇ ಮಂಗಳವಾರ ನಮ್ಮ ಶಾಲೆಯ ಹತ್ತನೇ ತರಗತಿ ಪಿ. ಟಿ.ಎ ಸಮಾಲೋಚನಾ ಸಭೆ ನಡೆಯಿತು. ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಈಗಲೇ ತಯಾರಿ ನಡೆಸಲು ಸೂಚಿಸಲಾಯಿತು. ಹಾಗೆಯೇ ಪೋಷಕರು ತಮ್ಮ ಮಕ್ಕಳ ಕಾಲುವಾಷಿ೯ಕ ಪರೀಕ್ಷೆಯ ಪ್ರಗತಿ ಪರಿಶೀಲಿಸಿದರು....

Friday, September 19, 2014




                                   SCHOOL BLOG INAUGURATION

   The inaugural ceremony of our School Blog was conducted on September 19,2014 at 12 pm. Sureshkumar.M, H.S.A English of the school welcomed the gathering consisted of all teachers and students.Sharada Adekodlu, Headmistress of the school formally inaugurated the blog by logging in the site. Bharathy.Y.S, SITC of the school delivered speech on the importance and features of the blog. Vishnumoorthy Kakkillaya, P.T.A president of the school made felicitations. Shylajakumari, H.S.A Hindi of the school proposed vote of thanks. On the whole the programme was a grand success.

Sunday, September 7, 2014

Celebration of Onam

maveli

Prize  distribution  to winners  by  HEADMISTRESS 

ಪೂಕ್ಕಳಂ ವಿಜೇತರಿಗೆ  ಬಹುಮಾನ ನೀಡಲಾಯಿತು 

ಓಣಂ   ಔತಣ 
ಪೂಕ್ಕಳಂ    ಸ್ಪರ್ದ್ದೆಗೆ   ಮಕ್ಕಳು  ರಚಿಸಿದ  ಹೂವಿನ  ರಂಗೋಲಿಗಳು