" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Wednesday, June 21, 2017

ಅಂತರಾಷ್ಟ್ರೀಯ ಯೋಗ ದಿನಾಚರಣೆ ಜೂನ್ 21

ಎಡನೀರು: ಜೂನ್ 21 ,ಚೆಂಗಳ ಪಂಚಾಯತು ಮಟ್ಟ ದ ಅಂತರಾಷ್ಟ್ರೀಯ ಯೋಗ  ದಿನಾಚರಣೆಯನ್ನು ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಸಲಾಯಿತು. ಮುಖ್ಯ ಶಿಕ್ಷಕಿ ಶಾರದಾ ಅಡೆಕೋಡ್ಲು ರವರು ಯೋಗದ  ಮಹತ್ವವನ್ನು ತಿಳಿಸಿದರು. ಪಂಚಾಯತ್  ಉಪಾಧ್ಯಕ್ಷೆ ಶಾಂತಕುಮಾರಿ ಟೀಚರ್  ಔಪಚಾರಿಕವಾಗಿ ಉದ್ಘಾಟಿಸಿದರು.ಡಾ.ಮಹಮ್ಮದ್ ಇಂಥಿಹಾಸ್ ರವರು ನಮ್ಮ ಆರೋಗ್ಯ ರಕ್ಷಣೆಯಲ್ಲಿ ಯೋಗ ದ ಮಹತ್ವದ ಕುರಿತು ತಿಳಿಸಿದರು.ಹಿರಿಯ ಶಿಕ್ಷಕರಾದ ಮಧುಸೂಧನನ್ ರವರು ಮಕ್ಕಳಿಗೆ ಪ್ರಾಣಯಾಮ ದ ಕುರಿತು ಹೇಳಿದರು. ಹಿರಿಯ    ಶಿಕ್ಷಕರಾದ ಗಂಗಾಧರನ್  ಸ್ವಾಗತಿಸಿ ವಾಸುದೇವನ್ ರವರು ವಂದಿಸಿದರು. ಶಿಕ್ಷಕರಾದ ವೆಂಕಟ ಕೃಷ್ಣ ರವರು ಕಾರ್ಯಕ್ರಮ ನಿರೂಪಿಸಿದರು.ನಂತರ
ಶ್ರೀ ವಿಶ್ವನಾಥ ಭಟ್  ಹಾಗೂ ಡಾ. ಮಹಮ್ಮದ್ ಇಂಥಿಹಾಸ್ ರ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಯೋಗ ತರಭೇತಿ ನಡೆಸಲಾಯಿತು.No comments:

Post a Comment