" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Monday, October 20, 2014ಎಡನೀರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿಯೋಜನೆಯ ಸ್ವಾಸ್ಥ ಸಂಕಲ್ಪ ಹಾಗೂ ಪರಿಸರ ಜಾಗ್ರತಿ ಅಭಿಯಾನದ ಕಾರ್ಯಕ್ರಮವು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ 14.10.14 ರಂದು ಜರಗಿತು.ಸಭೆಯಅಧ್ಯಕ್ಷತೆಯನ್ನು
ಶಾಲಾಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಶಾರದ ಅಡೆಕ್ಕೊಡ್ಲು ಇವರು ವಹಿಸಿದರು. ಗ್ರಾಮಾಭಿವೃದ್ಧಯೋಜನೆಯ ಕಾಸರಗೋಡು ವಿಭಾಗದ ಸಂಯೋಜಿಕರಾದ ಶ್ರೀಮತಿ ಶಿವಲಕ್ಮಿ ಇವರು ಶ್ರೀ ಕ್ಷೇತ್ರದ ವಿವಿಧ ಯೋಜನೆಗಳನ್ನು ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದರು. ಸಂಪನ್ಮೂಲವ್ಯಕ್ತಿಗಳಾದ ರಾಜನ್ ಮುಳಿಯಾರು ಇವರು ಮಧ್ಯಪಾನ ಕೆಡುಕುಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಗಳನ್ನು ನೀಡಿದರು. ಹಿರಿಯ ಅಧ್ಯಾಪಿಕೆಯಾದ ಶಾಂತ ಕುಮಾರಿ ಟೀಚರ್ ಸ್ವಾಗತಿಸಿದರು. ಅದ್ಯಾಪಕರಾದ ವೆಂಕಟಕೃಷ್ಣ ಇವರು ಧನ್ಯವಾದವನ್ನು ಸಮರ್ಪಿಸಿದರು. ಅಭಿವೃದ್ಧಿ ಯೋಜನೆಯ ಎಡನೀರು ಘಟಕದ ರಾಜೀವಿಯವರು ಸಭೆಯಲ್ಲಿ ಪಾಲ್ಗೊಂಡರು.

No comments:

Post a Comment