" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Friday, October 27, 2017

ಉಪಜಿಲ್ಲಾಮಟ್ಟದ ಶಾಸ್ತ್ರಮೇಳದಲ್ಲಿ ಪ್ರಥಮ

ಕಾಸರಗೋಡು : ಜಿ.ವಿ. ಎಚ್ ಎಚ್ ಎಸ್ ಮೊಗ್ರಾಲ್ ಪುತ್ತೂರಿನಲ್ಲಿ   ಜರಗಿದ ಕಾಸರಗೋಡು ಉಪಜಿಲ್ಲಾ  ಮಟ್ಟದ  ಶಾಸ್ತ್ರಮೇಳದ ಹೈಸ್ಕೂಲ್   ವಿಭಾಗದ ಐ .ಟಿ  ಕನ್ನಡ ಟೈಪಿಂಗ್ ಸ್ಪರ್ಧೆಯಲ್ಲಿ  ವೈದೇಹಿ ಕೆ    'ಎ ' ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಪಡೆದು  ಜಿಲ್ಲಾ ಮಟ್ಟ ಕ್ಕೆ ಆಯ್ಕೆ ಯಾಗಿದ್ದಾಳೆ. ಈಕೆ   ಸ್ವಾಮೀಜಿಸ್  ಹೈಸ್ಕೂಲ್ ಎಡನೀರಿನ 8ನೇ  ತರಗತಿಯ ವಿದ್ಯಾರ್ಥಿನಿ  . ಎಡನೀರಿನ  ಕಳೇರಿ  ಗೋಪಾಲಕೃಷ್ಣ  ಹೇರಳ. ಕೆ  ಹಾಗೂ  ರಾಜೇಶ್ವರಿ.ಕೆ  ದಂಪತಿಯವರ ಸುಪುತ್ರಿ.

ಉಪಜಿಲ್ಲಾ ಮಟ್ಟದ ಶಾಸ್ತ್ರಮೇಳದಲ್ಲಿ ದ್ವಿತೀಯ....

ಕಾಸರಗೋಡು : ಜಿ.ವಿ. ಎಚ್ ಎಚ್ ಎಸ್ ಮೊಗ್ರಾಲ್ ಪುತ್ತೂರಿನಲ್ಲಿ   ಜರಗಿದ ಕಾಸರಗೋಡು ಉಪಜಿಲ್ಲಾ  ಮಟ್ಟದ ಶಾಸ್ತ್ರ ಮೇಳದಲ್ಲಿ ಹೈಸ್ಕೂಲ್   ವಿಭಾಗದ ಐ .ಟಿ  ರಸಪ್ರಶ್ನೆ ಸ್ಪರ್ಧೆಯಲ್ಲಿ   ವಿವೇಕ ಎಸ್.  ಭಟ್   'ಎ ' ಗ್ರೇಡಿನೊಂದಿಗೆ ದ್ವಿತೀಯ  ಸ್ಥಾನ ಪಡೆದು  ಜಿಲ್ಲಾ ಮಟ್ಟ ಕ್ಕೆ ಆಯ್ಕೆಯಾಗಿದ್ದಾನೆ . ಈತ  ಸ್ವಾಮೀಜಿಸ್  ಹೈಸ್ಕೂಲ್ ಎಡನೀರಿನ 8ನೇ  ತರಗತಿಯ ವಿದ್ಯಾರ್ಥಿ. ಈತ ಎಡನೀರಿನ  ಕಳೇರಿ  ಡಾ . ಸುಬ್ರಹ್ಮಣ್ಯ ಭಟ್ ಹಾಗೂ  ಸರೋಜ ದಂಪತಿಯವರ ಸುಪುತ್ರ.

ಉಪ ಜಿಲ್ಲಾ ಮಟ್ಟದ ಶಾಸ್ತ್ರಮೇಳದಲ್ಲಿ ಪ್ರಥಮ

ಕಾಸರಗೋಡು : ಜಿ.ವಿ. ಎಚ್ ಎಚ್ ಎಸ್ ಮೊಗ್ರಾಲ್ ಪುತ್ತೂರಿನಲ್ಲಿ   ಜರಗಿದ ಕಾಸರಗೋಡು ಉಪಜಿಲ್ಲಾ  ಮಟ್ಟದ ಶಾಸ್ತ್ರಮೇಳದಲ್ಲಿ ಹೈಸ್ಕೂಲ್   ವಿಭಾಗದ ವೇಸ್ಟ್ ಮೆಟೀರಿಯಲ್ ಪ್ರೊಡೆಕ್ಟ್ಸ್ ಸ್ಪರ್ಧೆಯಲ್ಲಿ  ಕು . ಶ್ರೀಪ್ರಿಯ  ಎಮ್   'ಎ ' ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಪಡೆದು  ಜಿಲ್ಲಾ ಮಟ್ಟ ಕ್ಕೆ ಆಯ್ಕೆ ಯಾಗಿದ್ದಾಳೆ. ಈಕೆ   ಸ್ವಾಮೀಜಿಸ್  ಹೈಸ್ಕೂಲ್ ಎಡನೀರಿನ 8ನೇ  ತರಗತಿಯ ವಿದ್ಯಾರ್ಥಿನಿ.  ಅಧ್ಯಾಪಕರಾದ ಮಧುಸೂದನನ್ ಪಿ .ಯನ್  ಹಾಗೂ ರಾಜೇಶ್ವರಿ ಇವರ ಸುಪುತ್ರಿ. 

Tuesday, October 10, 2017

ಶಾರದಾ ಪೂಜೆ

ಎಡನೀರು: ಸ್ವಾಮೀಜೀಸ್  ಹೈಯರ್ ಸೆಕೆಂಡರಿ ಶಾಲೆ ಯಲ್ಲಿ ಶಾರದಾ ಪೂಜೆ ಜರಗಿತು.ಶಿಕ್ಷ ಕರು ,ಶಿಕ್ಷ ಕಿಯರೂ ಹಾಗೂ ಮಕ್ಕಳು ಭಜನೆ ಹಾಡಿದರು.ನಂ ತರ ಮಕ್ಕಳಿಗೆ ಪುಸ್ತಕ  ಓದಿಸಲಾಯಿತು.

Monday, October 9, 2017

ಶಾಲಾ ಕಲೋತ್ಸವ




ಎಡನೀರು :ಸ್ವಾಮೀಜೀಸ್ ಹೈಸ್ಕೂಲ್ ಎಡನೀರಿ ನಲ್ಲಿ ಅಕ್ಟೋಬರ್ 5ಮತ್ತು 6ನೇ ತಾರೀಕಿನಂದು ಶಾಲಾ ಕಲೋ ತ್ಸ್ ವವು ನಡೆಯಿತು. ಶಾಲಾ ಮುಖ್ಯ ಶಿಕ್ಷಕಿ ಯವರಾದ ಶಾರದಾ ಅಡೆಕೋಡ್ಲು  ಶುಭ ಹಾರೈಸಿದರು . ನಂತರ ಭಾವಗೀತೆ ,ಗಾನ ಮೇಳ,ಮಿಮಿಕ್ರಿ ,ಒಪ್ಪನ ,ಸಂಘ ಗಾನ ,ನಾಟಕಸ್ಪರ್ಧೆಗಳು ನಡೆದವು .ವಿದ್ಯಾ ರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದರು .


Tuesday, October 3, 2017

ನಮ್ಮ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

ಎಡನೀರು: ಅಕ್ಟೋಬರ್ 2 ಸೋಮವಾರದಂದು ಗಾಂಧಿ ಜಯಂತಿಯನ್ನು  ಆಚರಿಸಲಾಯಿತು. ಬೆಳಗ್ಗೆ  ಶಾಲಾ  ಅಸ್ಸೆಂಬ್ಲಿ ನಡೆಸಲಾಯಿತು. ಹಿರಿಯ ಶಿಕ್ಷಕರಾದ ಮಧುಸೂಧನನ್ ರವರು ಮಕ್ಕಳನ್ನುದ್ದೇಶಿಸಿ ಮಾತನಾಡಿ ಗಾಂಧಿ ವಾದದ  ಪ್ರಮುಖ ಆಶಯವಾದ  ಶಾಲಾ ಪರಿಸರ ದ ಸ್ವಚ್ಛತೆಯ ಬಗ್ಗೆ  ಮಾತನಾಡಿದರು. ನಂತರ ಮಕ್ಕಳು  ಶಾಲಾ ಪರಿಸರವನ್ನು ಸ್ವಚ್ಛ ಗೊಳಿಸಿದರು. ಮಕ್ಕಳಿಗೆ  ಲಘು ಉಪಹಾರವನ್ನು ಕೊಡಲಾಯಿತು.

Friday, September 29, 2017

ಕ್ಲಾಸ್ ಪಿ.ಟಿ.ಎ ಸಭೆ- ವಿದ್ಯಾರ್ಥಿಗಳ ಸಾಧನೆಯನ್ನು ಪರಿಶೀಲಿಸಿದ ಪೋಷಕರು

ಎಡನೀರು: ಮಗುವಿನ ಸರ್ವತೋಮುಖ ವಿಕಾಸದ ಮಂದಿರ ಎಂದರೆ ಶಾಲೆ,  ಶಾಲೆಯಲ್ಲಿ  ಮಗುವಿನ ಕಲಿಕೆ ಯಶಸ್ವಿಯಾಗಿ ಸಾಗಲು ಮನೆಯ  ಪರಿಸರ ಹಾಗೂ  ಪೋಷಕರ ಸ್ಥಿತಿ ಅವರ ಪ್ರೋತ್ಸಾಹ ಕೂಡ ಅಗತ್ಯ.       ತಮ್ಮ ತಮ್ಮ ಮಕ್ಕಳ  ಶೈಕ್ಷಣಿಕ ಪ್ರಗತಿಯ ಕುರಿತ   ಚರ್ಚೆ ನಡೆಸುವ ಸಲುವಾಗಿ  ಕ್ಲಾಸ್  ಪಿ. ಟಿ.ಎ  ಸಭೆಯನ್ನು ಕರೆಯಲಾಗಿತ್ತು. ಈ ಸಲದ ಕಾಲು ವಾರ್ಷಿಕ ಪರೀಕ್ಷೆಯ ಪಲಿತಾಂಶದ ಆಧಾರದಲ್ಲಿ ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಪೋಷಕರಲ್ಲಿ ಸಮಾಲೋಚನೆ ನಡೆಸಿದರು. 10ನೇ ತರಗತಿಯ ಪಿ. ಟಿ.ಎ ಸಭೆ 26ನೇ ತಾರೀಕು ಮಂಗಳವಾರ  ಹಾಗೂ  9ನೇ ತರಗತಿ ಪಿ. ಟಿ.ಎ ಸಭೆ 27ನೇ ತಾರೀಕು,ಹಾಗೇ  8 ಹಾಗೂ 7-5 ತರಗತಿಯ ಪಿ. ಟಿ.ಎ ಸಭೆ 28ನೇ ಗುರುವಾರ  ಸಂಜೆ 3:30 ರ ನಂತರ ನಡೆಯುತು. ಈ ಸಭೆಯಲ್ಲಿ  ರೋಬೆಲ್ಲಾ ರೋಗಕ್ಕೆ ಹಾಕುವ ಲಸಿಕೆಯ ಕುರಿತಂತೆ ಪೋಷಕರಿಗೆ ಅರಿವು ಮೂಡಿಸುವ ಸಲುವಾಗಿ ಸರ್ಕಾರಿ ವೈದ್ಯರು  ಭಾಗವಹಿದ್ದರು.
               

ದಸರಾ ಹಬ್ಬದ ಪ್ರಯುಕ್ತ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ನಡೆದ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದವರು

ಕಾಸರಗೋಡು: ದಸರಾ ಹಬ್ಬದ ಪ್ರಯುಕ್ತ  ಕಾಸರಗೋಡು  ಸರ್ಕಾರಿ ಕಾಲೇಜಿನಲ್ಲಿ  ಹೈಸ್ಕೂಲ್ ಶಾಲಾ  ಮಟ್ಟದಲ್ಲಿ ನಡೆದ  ವಿವಿಧ ಸ್ಪರ್ದೆಗಳಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಭಾಷಣ ಸ್ಪರ್ದೆಯಲ್ಲಿ  10ನೇ ಕ್ಲಾಸ್ ನ ವೀಣಾಸುಮತಿ, ಕವಿತಾರಚನೆಯಲ್ಲಿ 10ನೇ ತರಗತಿಯ ಅಂಬಿಕ , ಹಾಗೂ ಭಾವಗೀತೆ ಸ್ಪರ್ದೆಯಲ್ಲಿ  8ನೇ ತರಗತಿಯ ವೈಧೇಹಿ ಪ್ರೋತ್ಸಾಹಕ ಬಹುಮಾನ ಗಳಿಸಿದರು.  ಈ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕ-ರಕ್ಷಕ  ಸಭೆಯಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀ ಮತಿ ಶಾರದಾ ಎಡೆಕೋಡ್ಲುರವರು ಅಭಿನಂದಿಸಿದರು.

Thursday, September 28, 2017

ಮಕ್ಕಳಿಗೆ ಕೋಳಿ ವಿತರಣೆ

ಎಡನೀರು: ನಮ್ಮ ಶಾಲೆಯ 50 ಮಕ್ಕಳಿಗೆ  ತಲಾ 5 ಕೋಳಿ ಮರಿಗಳನ್ನು  ವಿತರಣೆ  ಮಾಡಲಾಯಿತು. ನಮ್ಮ ಪಂಚಾಯತ್  ಅಧ್ಯಕ್ಷೆ  ಸಾಹಿನ ಸಲೀಮ್  ಮಕ್ಕಳಿಗೆ ಕೋಳಿಮರಿಗಳನ್ನು ವಿತರಿಸುವುದರ ಮೂಲಕ  ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.ಹಾಗೂ ಈ ಕಾರ್ಯಕ್ರಮದ  ಯೋಜನೆಯ ಸಮಗ್ರ ಪರಿಚಯ ಮಾಡಿಕೊಟ್ಟರು. ಮುಖ್ಯೋಪಾಧ್ಯಾಯಿನಿ  ಶಾರದ ಎಡಕೋಡ್ಲು ರವರು ಮಕ್ಕಳಿಗೆ  ಈ ರೀತಿಯ  ಸ್ವ ಉದ್ಯೋಗಕ್ಕೆ ಪ್ರೋತ್ಸಾಹಿಸುವ ಯೋಜನೆಯ ಬಗ್ಗೆ ಮಾತನಾಡಿ ವೈಯುಕ್ತಿಕವಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಈ ರೀತಿಯ  ಕಾರ್ಯಕ್ರಮ ಹೇಗೆ ಸಹಕಾರಿ ಎಂದು ಹೇಳಿದರು. ಪಂಚಾಯತ್ ಉಪಾಧ್ಯಕ್ಷೆ ಶಾಂತಕುಮಾರಿ ಟೀಚರ್  ಸಭೆಯಲ್ಲಿ ಉಪಸ್ಥಿತರಿದ್ದರು.

Tuesday, August 15, 2017

71 ನೇ ಸ್ವಾತಂತ್ರ್ಯ ದಿನೋತ್ಸವ ಆಚರಣೆ

ಎಡನೀರು: 71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಬೆಳಗ್ಗೆ 9:30 ಕ್ಕೆ ಸರಿಯಾಗಿ ದ್ವಜಾರೋಹಣವನ್ನು ಶಾಲಾ ಪ್ರಾಂಶುಪಾಲರಾದ ನಾರಾಯಣ ರವರು ನೆರವೇರಿಸಿದರು.ಮುಖ್ಯೋಪಾಧ್ಯಾಯಿನಿ ಶಾರದಾ ಅಡೆಕೋಡ್ಲು ರವರು ಸ್ವಾತಂತ್ರ್ಯದಿನಾಚರಣೆಯ ಬಗ್ಗೆ ಮಾತನಾಡಿದರು. ನಂತರ ನಡೆದ  ಕಾರ್ಯಕ್ರಮದಲ್ಲಿ ಭಾಷಣ, ದೇಶಭಕ್ತಿ ಗೀತೆ ಸ್ಪರ್ದೆಗಳು ನಡೆದವು. ಮುಖ್ಯೋಪಾಧ್ಯಾಯಿನಿಯವರು ಸ್ವಾತಂತ್ರ್ಯದಿನಾಚರಣೆಯ ಆಂಗವಾಗಿ ನಡೆದ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಿದರು.  ಸಂಸ್ಕ್ರತ ಸ್ಕೋಲರ್ ಶಿಪ್ ಲಭಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. 7 ನೇ ತರಗತಿಯ ವಿದ್ಯಾರ್ಥಿಗಳ  " ಸೇವ್ ಪ್ಲಾನೆಟ್ ಅರ್ಥ್" ಎಂಬ  ಇಂಗ್ಲೀಷ್  ಮ್ಯಾಗಜ಼ೀನ್ ನ್ನು ಮುಖ್ಯೋಪಾಧ್ಯಾಯಿನಿಯವರು ಬಿಡುಗಡೆ  ಗೊಳಿಸಿದರು.ನಂತರ ಮಕ್ಕಳ   ಈ ಕಾರ್ಯವನ್ನು ಪ್ರಶಂಸಿಸಿದರು. ಈ ಕಾರ್ಯಕ್ರಮವನ್ನು  ಸಮಾಜ ವಿಜ್ಞಾನ ಅದ್ಯಾಪಕರಾದ ರಾಮಮೋಹನ ರವರು ನಿರೂಪಿಸಿದರು.

Sunday, July 23, 2017

ಚಾಂದ್ರ ದಿನ ಪ್ರಯುಕ್ತ ರಸಪ್ರಶ್ನೆ

ಎಡನೀರು: ಜುಲೈ 21 ಚಾಂದ್ರ ದಿನ ಪ್ರಯುಕ್ತ ರಸಪ್ರಶ್ನೆ ಆಯೋಜಿಸಲಾಯಿತು. ಮುಖ್ಯೋಪಾದ್ಯಾಯಿನಿ ಶಾರದಾ ಅಡೆಕೊಡ್ಲುರವರು ಮಕ್ಕಳಿಗೆ ಚಾಂದ್ರದಿನದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು.ನಂತರ ನಡೆದ ರಸಪ್ರಶ್ನೆಯಲ್ಲಿ ಯು.ಪಿ ವಿಭಾಗದಲ್ಲಿ 7 ನೇ ತರಗತಿಯ ಪೂಜಾ.ಕೆ  ಪ್ರಥಮ ಹಾಗೂ ದ್ವಿತೀಯ ಶ್ರಾವ್ಯ ಯನ್, ಹಾಗೂ ಹೈಸ್ಕೂಲ್ ವಿಭಾಗಲ್ಲಿ ಪ್ರಥಮ ವಿವೇಕ್ ಎಸ್ ಭಟ್ ಹಾಗೂ ದ್ವಿತೀಯ ಮಂಜುಶ್ರೀ ಶಿವಾಣಿ ಬಹುಮಾನ ಗಳಿಸಿದರು.

Sunday, July 2, 2017

ಶಿಕ್ಷಕ-ಪೋಷಕರ ಮೊದಲ ಸಭೆ :ಎಸ್ ಎಸ್ ಎಲ್ ಸಿ ಸಾಧಕರಿಗೆ ಸನ್ಮಾನ..

ಎಡನೀರು: ಜೂನ್ 29 ಗುರುವಾರ , ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆಯ ಮೊದಲ ಶಿಕ್ಷಕ -ಪೋಷಕರ  ಸಭೆಯು  ಶಾಲೆಯ ಮುಖ್ಯ ಶಿಕ್ಷಕಿ ಶಾರದಾ ಅಡೆಕೋಡ್ಲು ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಹಿರಿಯ ಶಿಕ್ಷಕರಾದ ಮದುಸೂಧನನ್ ರವರು ಎಲ್ಲರನ್ನೂ  ಸಭೆಗೆ ಸ್ವಾಗತಿಸಿದರು.  ಮುಖ್ಯ ಶಿಕ್ಷಕಿ ಮಕ್ಕಳ  ಸರ್ವಾಂಗಣ ವಿಕಾಸದಲ್ಲಿ  ಪೋಷಕರ ಪಾತ್ರ ದ ಕುರಿತು ಭಾಷಣದಲ್ಲಿ  ಹೇಳಿದರು. ಸಭೆಯಲ್ಲಿ  2016-17 ಸಾಲಿನ SSLC ಪರೀಕ್ಷೆಯಲ್ಲಿ  ಎಲ್ಲಾ  ವಿಷಯಗಳಲ್ಲೂ A+ ಗಳಿಸಿದ ದುರ್ಗಾ ಸಿ.ಎಚ್  ಹಾಗು 9 A+ ಗಳಿಸಿದ ಅಶ್ವಿನಿ ಎನ್.ಸಿ  ಇವರಿಗೆ ಅಭಿನಂದಿಸಲಾಯಿತು. ಸಭೆಯಲ್ಲಿ ವಿವಿಧ ಸಮಿತಿಯನ್ನು  ರಚಿಸಲಾಯಿತು. ಪಂಚಾಯತ್ ಉಪಾಧ್ಯಕ್ಷೆ ಶಾಂತಕುಮಾರಿ ಟೀಚರ್ ಸಭೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಶೈಲಜಾ ಟೀಚರ್  ಎಲ್ಲರಿಗೂ ಧನ್ಯವಾದವನ್ನು ಸಲ್ಲಿಸಿದರು  ಶಿಕ್ಷಕರಾದ ವೆಂಕಟ ಕೃಷ್ಣ ರವರು ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಎಲ್ಲಾ ಶಿಕ್ಷಕರು ಹಾಗು ಪೋಷಕರು ಭಾಗವಹಿಸಿದ್ದರು.


Wednesday, June 21, 2017

ಅಂತರಾಷ್ಟ್ರೀಯ ಯೋಗ ದಿನಾಚರಣೆ ಜೂನ್ 21

ಎಡನೀರು: ಜೂನ್ 21 ,ಚೆಂಗಳ ಪಂಚಾಯತು ಮಟ್ಟ ದ ಅಂತರಾಷ್ಟ್ರೀಯ ಯೋಗ  ದಿನಾಚರಣೆಯನ್ನು ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಸಲಾಯಿತು. ಮುಖ್ಯ ಶಿಕ್ಷಕಿ ಶಾರದಾ ಅಡೆಕೋಡ್ಲು ರವರು ಯೋಗದ  ಮಹತ್ವವನ್ನು ತಿಳಿಸಿದರು. ಪಂಚಾಯತ್  ಉಪಾಧ್ಯಕ್ಷೆ ಶಾಂತಕುಮಾರಿ ಟೀಚರ್  ಔಪಚಾರಿಕವಾಗಿ ಉದ್ಘಾಟಿಸಿದರು.ಡಾ.ಮಹಮ್ಮದ್ ಇಂಥಿಹಾಸ್ ರವರು ನಮ್ಮ ಆರೋಗ್ಯ ರಕ್ಷಣೆಯಲ್ಲಿ ಯೋಗ ದ ಮಹತ್ವದ ಕುರಿತು ತಿಳಿಸಿದರು.ಹಿರಿಯ ಶಿಕ್ಷಕರಾದ ಮಧುಸೂಧನನ್ ರವರು ಮಕ್ಕಳಿಗೆ ಪ್ರಾಣಯಾಮ ದ ಕುರಿತು ಹೇಳಿದರು. ಹಿರಿಯ    ಶಿಕ್ಷಕರಾದ ಗಂಗಾಧರನ್  ಸ್ವಾಗತಿಸಿ ವಾಸುದೇವನ್ ರವರು ವಂದಿಸಿದರು. ಶಿಕ್ಷಕರಾದ ವೆಂಕಟ ಕೃಷ್ಣ ರವರು ಕಾರ್ಯಕ್ರಮ ನಿರೂಪಿಸಿದರು.ನಂತರ
ಶ್ರೀ ವಿಶ್ವನಾಥ ಭಟ್  ಹಾಗೂ ಡಾ. ಮಹಮ್ಮದ್ ಇಂಥಿಹಾಸ್ ರ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಯೋಗ ತರಭೇತಿ ನಡೆಸಲಾಯಿತು.







Monday, June 5, 2017

ವಿಶ್ವ ಪರಿಸರ ದಿನಾಚರಣೆ 


ವಿಶ್ವ ಪರಿಸರ ದಿನಾಚರಣೆ 

ಎಡನೀರು: ಸ್ವಾಮೀಜಿಸ್ ಹೈಸ್ಕೂಲ್ಎಡನೀರಿನಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು . ನಮ್ಮ ಶಾಲೆಯ ನಿವೃತ್ತ ಪ್ರಾಂಶುಪಾಲರಾದ ಶ್ರೀ ರಾಜೇಂದ್ರ ಕಲ್ಲೂರಾಯರು ಪರಿಸರ ದಿನಾಚರಣೆಯ ಮಹತ್ವ ವನ್ನು ಮಕ್ಕಳಿಗೆ ತಿಳಿಸಿದರು .ಶಾಲಾ ಮುಖ್ಯಶಿಕ್ಷಕಿ  ಶ್ರೀಮತಿ ಶಾರದ ಅಡೆಕೋಡ್ಲುರವರು ತಮ್ಮ ಪರಿಸರದ ಬಗ್ಗೆ ಕಾಳಜಿವಹಿಸುವಲ್ಲಿ ಮಕ್ಕಳ ಪಾತ್ರದ ಬಗ್ಗೆ ಹೇಳಿದರು. ನಂತರ ಮಕ್ಕಳಿಗೆ ಗಿಡಗಳನ್ನು ವಿತರಿಸಲಾಯಿತು .



ಶ್ರೀ ನಾರಾಯಣ ಶರ್ಮಾರಿಗೆ ಶ್ರದ್ಧಾಂಜಲಿ

ಶ್ರದ್ಧಾಂಜಲಿ 


 

 

 

 

ಸ್ವಾಮೀಜೀ ಸ್ ಹೈಯರ್ ಸೆಕೆಂಡರಿ ಶಾಲೆ ಎಡನೀರಿನ ಜವಾನರಾಗಿ ಸೇವೆಯಿಂದ ನಿವೃತ್ತಿ ಹೊಂದಿದ ಶ್ರೀ ನಾರಾಯಣ ಶರ್ಮರು ತಾರೀಕು 03-06-2017 ರಂದು ದೈವಾಧೀನರಾದರು . ಅವರ ಆತ್ಮಕ್ಕೆ ಸುಖ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವ ಶಾಲಾ ಮುಖ್ಯೋ ಪಾಧ್ಯಾಯರು ,ಅಧ್ಯಾಪಕರು ,ಸಿಬ್ಬಂದಿಗಳು ಹಾಗೂ ಮಕ್ಕಳು .

 

 

 

 

 

 

 

Sunday, June 4, 2017

ಎಲ್ಲಾ ವಿಷಯಗಳಲ್ಲೂ A+ ಗ್ರೇಡ್ ನೊಂದಿಗೆ ತೇರ್ಗಡೆಯಾದ ದುರ್ಗಾ ಸಿ.ಎಚ್.

ಎಡನೀರು: 2016-17 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ A+ ಗ್ರೇಡ್ ನೊಂದಿಗೆ ತೇರ್ಗಡೆಯಾದ ಸ್ವಾಮೀಜೀಸ್ ಹೈಯರ್    ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ  ದುರ್ಗಾ ಸಿ.ಎಚ್.ಇವಳು ದೀಪಕುಮಾರ.ಪಿ. ಹಾಗು ಸರೋಜಿನಿ ಸಿ.ಎಚ್ ದಂಪತಿಗಳ ಪುತ್ರಿ.

Thursday, June 1, 2017

ಶಾಲಾ ಪ್ರವೇಶೋತ್ಸವ 2017-18

                       ಶಾಲಾ ಪ್ರವೇಶೋತ್ಸವ 2017-18

ಎಡನೀರು : ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆ ಎಡನೀರಿನಲ್ಲಿ  ಜೂನ್ ಒಂದನೇ ತಾರೀಕಿನಂದು ಶಾಲಾಪ್ರವೇಶೋತ್ಸವವುಜರಗಿತು.ಮಕ್ಕಳನ್ನುಮೆರೆವಣಿಗೆಯೊಂದಿಗೆ ಪ್ರವೇಶೋತ್ಸವದ ಗೀತೆಯನ್ನು ಕೇಳಿಸುವ ಮುಖಾಂತರ ಶಾಲೆಗೆ ಸ್ವಾಗತಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶಾರದ ಎಡೆಕೋಡ್ಲುರವರು ಮಕ್ಕಳಿಗೆ ಶುಭ ಹಾರೈಸಿದರು.ಈ ದಿನ ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ),ಇದರ ಗೌರವಾಧ್ಯಕ್ಷರಾದ ಶ್ರೀಮತಿ ಮತ್ತು ಶ್ರೀ ಗೋಪಾಲಕೃಷ್ಣ ಭಟ್ ಹಾಗೂ ಅಧ್ಯಕ್ಷೆಯಾದ ಶ್ರೀಮತಿ ಅನುಪಮಾ ರಾಘವೇಂದ್ರರವರು ನಮ್ಮ ಶಾಲೆಯ ಹೊಸ ವಿದ್ಯಾರ್ಥಿಗಳಿಗೆ ಪುಸ್ತಕ,ಪೆನ್ನು ಹಾಗೂ ಆರ್ಥಿಕವಾಗಿ ಹಿಂದುಳಿದ ಎಂಟು ವಿದ್ಯಾರ್ಥಿಗಳಿಗೆ ಎಲ್ಲಾ ಬರೆಯುವ ಪುಸ್ತಕಗಳನ್ನೂ, ಪೆನ್ನನ್ನೂ ವಿತರಿಸಿದರು.ಶಾಲಾ ಅಧ್ಯಾಪಕರೂ, ಸಿಬ್ಬಂದಿ ವರ್ಗದವರೂ ಉಪಸ್ಥಿತರಿದ್ದರು. 




Friday, January 6, 2017





 ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆ ಎಡನೀರು  
  ಹಸಿರು ಕೇರಳ ಆಚರಣೆ 
 
ಹಸಿರು ಕೇರಳ ಆಚರಣೆಯು   ಡಿಸಂಬರ್ 8 ನೇ ಗುರುವಾರ ನಮ್ಮಶಾಲೆಯಲ್ಲಿ ಆಚರಿಸಲಾಯುತು. ಬೆಳಗ್ಗೆ 9:30 ಕ್ಕೆ ಶಾಲಾ ಎಸೆ೦ಬ್ಲೀ ಕರೆದು ಮಕ್ಕಳಿಗೆ ಹರಿದ ಕೇರಳ ಪ್ರತಿಜ್ಞೆ ಯನ್ನು  ಹಿರಿಯ  ಶಿಕ್ಷಕಿಶ್ರೀಮತಿ ಶಾಂತ ಕುಮಾರಿ ಟೀಚರ್ ಬೋಧಿಸಿದರು. ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಶಾರದ ಎಡೆಕೋಡ್ಲು  ಅವರು ಮಕ್ಕಳಿಗೆ ಪರಿಸರದ ಮಹತ್ವ,ನೀರಿನ ಸಂರಕ್ಷಣೆ ಹಾಗು ಗಿಡಮರಗಳನ್ನು ನೆಟ್ಟು ಬೆಳೆಸಬೇಕೆಂದು ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸಿದರು.
  ನಂತರ ಹಸಿರು ಕೇರಳ ಜಾಗೃತಿ ಜಾಥಾ ನಡೆಸಲಾಯಿತು  ಮಕ್ಕಳೆಲ್ಲರೂ ಹಸಿರು ಕೇರಳದ ಬಗ್ಗೆ ಘೋಷಣೆಯನ್ನು ಕೂಗುತ್ತಾ ಜಾಥಾದಲ್ಲಿ ಭಾಗವಹಿಸಿದರು. ನಂತರ ಹಸಿರು ಕೇರಳ ಆಚರಣೆಯ ಅಂಗವಾಗಿ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅತಿಥಿ ಯಾಗಿ  ಮಾಜಿ ಜಿಲ್ಲಾ ವಿಧ್ಯಾಧಿಕಾರಿ ಯಾದ ವೇಣುಗೋಪಾಲನ್. ಇ. ರವರು ಭಾಗವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ "ಪ್ರಕೃತಿ ಮಾನವನ ಮಿತ್ರ"  ಎಂಬ ವಿಷಯದಲ್ಲಿ ಮಕ್ಕಳು  ಭಾಷಣ ವನ್ನು ಮಾಡಿದರು ಹಾಗೂ ಪ್ರಕೃತಿಯ ಬಗ್ಗೆ ಜಾಗ್ರತಿ ಮೂಡಿಸುವ ಚಿತ್ರರಚನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.  ಹಸಿರಿನ ಮಹತ್ವವನ್ನು  ಸಾರುವ    ಪರಿಸರ ಹಾಡುಗಳನ್ನು ಸಾಮೂಹಿಕವಾಗಿ  ಹಾಡಿದರು. ಕೊನೆಯಲ್ಲಿ ವಿಜೇತರಿಗೆ ಬಹುಮಾನವನ್ನುಕೊಡಲಾಯಿತು  ಕೊನೆಗೆ ಶಾಲಾ ಹಿರಿಯ ಅಧ್ಯಾಪಕರಾದ ಮಧುಸೂದನನ್ ಪಿ.ಎನ್   ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು. ಸಂಜೆ 3:30ಕ್ಕೆ ಸರಿಯಾಗಿ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದ೦ತೆ ನಮ್ಮ ಶಾಲಾಪರಿಸರ ವನ್ನು ಶುಚಿ ಗೊಳಿಸಿದರು .