" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Saturday, November 20, 2021

ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ

 ಕೇರಳ ಸರ್ಕಾರದ "ಶಿಕ್ಷಾ ಕಿರಣ" ಯೋಜನೆಯ ಅಂಗವಾಗಿ 23 ಅರ್ಹ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್  ವಿತರಿಸಲಾಯಿತು.

Sunday, November 14, 2021

ಮಕ್ಕಳು ಮನೆಯಲ್ಲಿ ಮಾಡಿದ ತರಕಾರಿ ಕೃಷಿ

ಕೊರೋನಾ ಸಮಯದ ಅವಧಿಯಲ್ಲಿ ನಮ್ಮ ಶಾಲಾ ಯುಪಿ ವಿಭಾಗದ ವಿದ್ಯಾರ್ಥಿಗಳು ಮನೆಯಲ್ಲಿ  ಮಾಡಿದ ತರಕಾರಿ ಕೃಷಿ.

Friday, November 12, 2021

2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ

ಎಡನೀರು:2020-21 ನೇ ಸಾಲಿನ SSLC ಪರೀಕ್ಷೆಯಲ್ಲಿ  ಎಲ್ಲಾ ವಿಷಯಗಳಲ್ಲೂ 'ಎ+' ಗಳಿಸಿದ ವಿದ್ಯಾರ್ಥಿಗಳಾದ  ದೇವಿಕಾ ಶಿವಾನಿ,ಶ್ರಾವ್ಯ, ದೇವಿಕಾ ,ರೆಶ್ಮಿಪ್ರಭ,ಶೃತಿ,ಗುರುಕಿರಣ್, ಕೀರ್ತಿ  ಹಾಗೂ '9 ಎ+'ಗಳಿಸಿದ ವಿದ್ಯಾರ್ಥಿನಿಯಾದ ಪೂಜ‍ಾ ನನ್ನು ಶಾಲಾ ವತಿಯಿಂದ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು, ಸಿಬ್ಬಂದಿ ವರ್ಗದವರು ಅಭಿನಂದಿಸಿದರು.

Tuesday, March 3, 2020

ಶಾಲಾ ಕಲಿಕೋತ್ಸವ 26/02/2020

ನಮ್ಮ  ಶಾಲಾ ಕಲಿಕೋತ್ಸವವು 26 ನೇ ತಾರೀಖಿನಂದು ನಡೆಯಿತು. ಮುಖ್ಯೋಪಾಧ್ಯಾಯರಾದ ಮಧುಸೂದನನ್ ರವರು 7ನೇ ತರಗತಿಯ ಮಕ್ಕಳು ಸಿದ್ಧಗೊಳಿಸಿದ 'ವಿಂಗ್ಸ್'  ಎಂಬ ಮ್ಯಾಗಜೀನ್  ನ್ನು ಬಿಡುಗಡೆಗೊಳಿಸಿ  ಕಾರ್ಯಕ್ರಮವನ್ನು  ಉದ್ಘಾಟಿಸಿದರು. ಪಿ.ಟಿ.ಎ ಉಪಾಧ್ಯಕ್ಷರಾದ ಪುರುಷೋತ್ತಮ ಕಲ್ಲುಗದ್ದೆಯವರು ಅತಿಥಿ ಯಾಗಿದ್ದರು.ಎಲ್ಲಾ ಮಕ್ಕಳು ಇದರಲ್ಲಿ ಭಾಗವಹಿಸಿದರು. ವಿಜ್ಞಾನದ ಪ್ರಯೋಗ, ನಾಟಕ, ಸಮಾಜ ವಿಜ್ಞಾನದಲ್ಲಿ ಕಿರುನಾಟಕ, ಚಾರ್ಟ್, ಮೋಡೆಲ್ಸ್ , ಗಣಿತದಲ್ಲಿ  ಚಾರ್ಟ್ ಹಾಗೂ ಸೆಮಿನಾರ್ , ಇಂಗ್ಲೀಷ್‌ನಲ್ಲಿ ನಾಟಕ ಹಿಂದಿಯಲ್ಲಿ ಸಂಸ್ಕೃತದಲ್ಲಿ  ಹಾಡು ಹೀಗೆ ಹಲವಾರು ಕಾರ್ಯಕ್ರಮವನ್ನು ಮಕ್ಕಳು ನಡೆಸಿ ಕೊಟ್ಟರು. ಈ ಕಲಿಕಾ ವರ್ಷದಲ್ಲಿ  ಕಲಿತ  ಅನುಭವಗಳನ್ನು ಕಾರ್ಯಕ್ರಮದಲ್ಲಿ ಅಳವಡಿಸಿದರು.  ನಮ್ಮ  ಡಿ.ಪಿ.ಒ ಕಾರ್ಯಕ್ರಮವನ್ನು  ವೀಕ್ಷಿಸಿದರು.ಶಿಕ್ಷಕರು,ಪಿ.ಟಿ.ಎ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.