Saturday, February 9, 2019
'ಕಲಿಕೋತ್ಸವ' ನಮ್ಮ ಶಾಲೆಯಲ್ಲಿ
Thursday, January 31, 2019
ಕಲಿಕೋತ್ಸವ 2018-19
ನಮ್ಮ ಶಾಲೆಯ ಕಲಿಕೋತ್ಸವ 08 ಫೆಬ್ರವರಿ 2019 ರಂದು ನಡೆಸಲು ತೀರ್ಮಾನ ತೆಗೆದುಕೊಳ್ಳುವುದು. ಪಂಚಾಯತ್ ಉಪಾಧ್ಯಕ್ಷೆ ಶಾಂತ ಕುಮಾರಿಯವರು ಮುಖ್ಯಅತಿಥಿಯಾಗಿ ಭಾಗವಹಿಸುವರು.
Tuesday, October 30, 2018
ಮಧುರ ಕನ್ನಡ ಪೂರ್ವಭಾವಿ ಪರೀಕ್ಷೆ
ಹೈಸ್ಕೂಲ್ ಹಾಗೂ ಯುಪಿ ವಿಭಾಗದ ಮಧುರ ಕನ್ನಡ ಪೂರ್ವಭಾವಿ ಪರೀಕ್ಷೆ 12 ನೇ ತಾರೀಕು ಶಾಲೆಯಲ್ಲಿ ನಡೆಸಲಾಯಿತು.ಪ್ರತ್ಯೇಕವಾಗಿ ಇಪ್ಪತ್ತು ಇಪ್ಪತ್ತರ ಹಾಗೆ ಎರಡು ಗುಂಪುಗಳನ್ನು ಮಾಡಲಾಯಿತು ಒಟ್ಟು 40 ಮಕ್ಕಳನ್ನು ಆಯ್ಕೆ ಮಾಡಲಾಯಿತು.
Tuesday, October 23, 2018
ಶಾಲಾ ಕಲೋತ್ಸವ
ಎಡನೀರು : ನಮ್ಮ ಶಾಲೆಯ ಶಾಲಾ ಕಲೋತ್ಸವ ಇದೇ ತಿಂಗಳ 16 ಹಾಗೂ 20 ನೇ ತಾರೀಕು ನಡೆಯಿತು.ಮುಖ್ಯೋಪಾಧ್ಯಾಯಿನಿ ಶಾರದಾ ಎಡೆಕೋಡ್ಲು ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, " ಸಹಪಠ್ಯ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ವೇದಿಕೆ ಎಂದು ಹೇಳಿದರು. ಸ್ಪರ್ಧಾ ಮನೋಭಾವನೆ ಬೆಳೆಸಲು ಈ ರೀತಿಯ ಕಾರ್ಯಕ್ರಮ ಮಕ್ಕಳಿಗೆ ಒಳ್ಳೆಯ ವೇದಿಕೆ " ಎಂದು ಹೇಳಿದರು.
ಎರಡು ದಿನ ನಡೆದ ಕಲೋತ್ಸವದಲ್ಲಿ ತಿರುವಾದಿರ,ನಾಡ-ನೃತ್ಯ೦,ಭರತನಾಟ್ಯ,ಯಕ್ಷಗಾನ ,ಮೂಕಾಭಿನಯ ,ಮಿಮಿಕ್ರಿ, ಮಾಪಿಳ್ಳೆ ಪಾಟ್ , ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಿತು. ಸಂಸ್ಕೃತೋತ್ಸವ ಜೊತೆಗೆ ನಡೆಯಿತು ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಎಲ್ಲಾ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.
Tuesday, October 2, 2018
ಅಕ್ಟೋಬರ್ 2 ಗಾಂಧಿ ಜಯಂತಿ
Friday, September 14, 2018
ಲಿಟ್ಲ್ ಕೈಟ್ಸ್ ಏಕದಿನ ಶಿಬಿರ
Monday, August 27, 2018
ಸ್ವಾತಂತ್ರ್ಯ ದಿನ ಆಚರಣೆ
ಎಡನೀರು: ಅಗೋಸ್ತು 15 ರಂದು ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಬ್ರಮದಲ್ಲಿ ಆಚರಣೆ ಮಾಡಲಾಯಿತು.ಬೆಳಗ್ಗೆ ವರುಣನ ಅಡಚಣೆ ಇದ್ದರೂ, 9:40 ಕ್ಕೆ ಸರಿಯಾಗಿ ಧ್ವಜಾರೋಹಣವನ್ನು ನಮ್ಮ ಗೌರವಾನ್ವಿತ ಪ್ರಾಂಶುಪಾಲರಾದ ಶ್ರೀ ನಾರಾಯಣ್ ರವರು ನಡೆಸಿ ಮಕ್ಕಳಿಗೆ ಹಿತವಚನವನ್ನು ಹೇಳಿದರು. ಗೌರವಾನ್ವಿತ ಮುಖ್ಯೋಪಾಧ್ಯಾಯಿನಿ ಶಾರದಾ ಅಡೆಕೋಡ್ಲುರವರು ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವಲ್ಲಿ ಯಶಸ್ವಿಯಾದರು.
ನಂತರ ನಡೆದ ಭಾಷಣ, ಪ್ರಬಂಧ,ಸ್ವಾತಂತ್ರ್ಯ ದಿನಾಚರಣಾ ರಸಪ್ರಶ್ನೆ ,ದೇಶಭಕ್ತಿ ಹಾಡಿನ ಸ್ಪರ್ಧೆಗಳಲ್ಲಿ ಮಕ್ಕಳು ಆಸಕ್ತಿ ಯಿಂದ ಭಾಗವಹಿಸಿದರು.ಕಾರ್ಯಕ್ರಮದ ಕೊನೆಗೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಎಲ್ಲರಿಗೂ ಸಿಹಿತಿಂಡಿ ವಿತರಿಸಿ,12:30 ಕ್ಕೆ ಕಾರ್ಯಕ್ರಮಕ್ಕೆ ವಿರಾಮ ನೀಡಲಾಯಿತು.