" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Saturday, February 9, 2019

'ಕಲಿಕೋತ್ಸವ' ನಮ್ಮ ಶಾಲೆಯಲ್ಲಿ

ಎಡೆನೀರು: ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಲಿಕೋತ್ಸವ ಇದೇ ಶುಕ್ರವಾರ ಜರಗಿತು. ಚೆಂಗಲ ಪಂಚಾಯತ್ ಉಪಾಧ್ಯಕ್ಷೆಯಾದ ಶ್ರೀಮತಿ ಶಾಂತಕುಮಾರಿ ಟೀಚರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳ  ವ್ಯಕ್ತಿತ್ವ ಬೆಳವಣಿಗೆಯಲ್ಲಿ ಇಂತಹ ಕಾರ್ಯಕ್ರಮಗಳು ಪರಿಣಾಮಕಾರಿ ಎಂದು ಹೇಳಿದರು . 7ನೇ ತರಗತಿ ವಿದ್ಯಾರ್ಥಿಗಳು ರಚಿಸಿದ ಇಂಗ್ಲೀಷ್ ಮ್ಯಾಗಜಿನ್ ' ಡ್ರಿಝಿಲ್ 'ನ್ನು  ಶಾಂತಕುಮಾರಿ ಟೀಚರ್ ಬಿಡುಗಡೆಗೊಳಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶಾರದಾ ಅಡೆಕೋಡ್ಲು ರವರು ಅಧ್ಯಕ್ಷರಾಗಿದ್ದರು. ಕಾಸರಗೋಡು ಬಿ.ಆರ್.ಸಿ ಯ  ಸಂಯೋಜಕಿಯಾದ ವೀಣಾ ಕಲಿಕೋತ್ಸವದ ಉದ್ದೇಶಗಳನ್ನು ಹೇಳಿದರು . ಸಹ ಸಂಚಾಲಕರಾದ ಮಧುಸೂಧನನ್ ರವರು ಶುಭಾಶಂಸನೆಗೈದರು. ಕಾರ್ಯಕ್ರಮದಲ್ಲಿ ಎಸ್.ಎಮ್.ಸಿ  ಸದಸ್ಯರು ,ಪಿ.ಟಿ.ಎ  ,ಎಮ್.ಪಿ.ಟಿ .ಎ ಅಧ್ಯಕ್ಷರು ಹಾಗೂ  ಸದಸ್ಯರೂ ಉಪಸ್ಥಿತರಿದ್ದರು. ಗಣಿತ,ವಿಜ್ಞಾನ, ಭಾಷೆ, ಸಮಾಜ ವಿಜ್ಞಾನ ಹೀಗೆ ಹಲವಾರು ವಿಷಯಗಳಲ್ಲಿ ವಿದ್ಯಾರ್ಥಿಗಳು ಪ್ರತಿಭೆಯನ್ನು ಪ್ರದರ್ಶಿಸಿದರು. ವಿದ್ಯಾರ್ಥಿನಿ ಅನನ್ಯ ಸಿ.ಎಚ್ ಕಾರ್ಯಕ್ರಮವನ್ನು ನಿರೂಪಿಸಿದಳು. ಪ್ರಜ್ಞಾ ಸ್ವಾಗತಿಸಿ,ವಿದ್ಯಾರ್ಥಿ ಶ್ಯಾಮ ಸುಬ್ರಹ್ಮಣ್ಯ ವಂದಿಸಿದನು.No comments:

Post a Comment