Saturday, November 9, 2019
ಅಮ್ಮಂ ದಿರಿಗೆ ಐ. ಟಿ. ತರಬೇತಿ
ಎಡನೀರು: ಅಮ್ಮಂದಿರಿಗೆ ಐ.ಟಿ. ತರಬೇತಿಯಯು ಸ್ವಾಮೀಜೀಸ್ ಹೈಸ್ಕೂಲಿನಲ್ಲಿ ಜರಗಿತು. ಹೊಸ ಪಾಠ ಪುಸ್ತಕದಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನರ್ , ಸಮಗ್ರ ಪೋರ್ಟಲ್, ವಿಕ್ಟರ್ ಚಾನೆಲ್ ಇತ್ಯಾದಿಗಳ ಪರಿಚಯವನ್ನು ಮಾಡಿಕೊಡಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಮಧುಸೂದನ್ ಉ ಪಸ್ಥಿತರಿದ್ದರು. ಭಾರತಿ ಟೀಚರ್ ತರಬೇತಿ ನೀಡಿದರು ಜ್ಯೋತಿಲಕ್ಷ್ಮಿ ಟೀಚರ್ ಸ್ವಾಗತಿಸಿ ಅಧ್ಯಾಪಕ ವೆಂಕಟಕೃಷ್ಣ ವಂದಿಸಿದರು.ಅಧ್ಯಾಪಕರು ಮತ್ತು little kites ಮಕ್ಕಳು ಸಹಕರಿಸಿದರು
ಉಪ ಜಿಲ್ಲಾ ಮಟ್ಟದ ಕಲೋತ್ಸವದ ಸಾಧಕರು
ಕು.ಅನ್ವಿತಾ.ಎನ್ .ಸಿ. |
ಕು.ವೈದೇಹಿ.ಕೆ. |
ಕು.ಶ್ರೀಪ್ರಿಯಾ.ಎಮ್ |
ಕು.ಅಮೃತ ಯು.ಆರ್ |
ಸುಧಾಸರಸ್ವತಿ ಸಿ.ಎಚ್ |
ವಿವೇಕ .ಎಸ್ .ಭಟ್ |
ಕು.ಶ್ರೀನಂದಾ.ಎಮ್
ಕೊಳತ್ತೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾಸರಗೋಡು ಉಪ ಜಿಲ್ಲಾ ಮಟ್ಟದ ಸಂಸ್ಕೃತೋತ್ಸವದ ಕವಿತಾರಚೆನೆಯಲ್ಲಿ 'ಎ'ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ಅನ್ವಿತಾ.ಎನ್ .ಸಿ. ಉಪ ಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಶಾಸ್ತ್ರೀಯ ಸಂಗೀತ,ಕನ್ನಡ ಕಂಠಪಾಠ,ಹಾಗೂ ಸಂಸ್ಕೃತೋತ್ಸವದ ಕಥಾರಚನೆ,ಅಷ್ಟಪದಿಯಲ್ಲಿ 'ಎ'ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ವೈದೇಹಿ.ಕೆ. ಸಂಸ್ಕೃತೋತ್ಸವದ ಉಪನ್ಯಾಸ ರಚನೆ ,ಸಮಸ್ಯಾಪೂರಣಂ,ಪಾಡಕಂ ನಲ್ಲಿ 'ಎ'ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ಕು.ಶ್ರೀಪ್ರಿಯಾ.ಎಮ್ . ಕಲೋತ್ಸವದಲ್ಲಿ ಕನ್ನಡ ಕಥಾರಚನೆ ಹಾಗೂ ಕವಿತಾರಚನೆಯಲ್ಲಿ 'ಎ'ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ಅಮೃತ ಯು.ಆರ್ . ಸಂಸ್ಕೃತೋತ್ಸವದ ಪ್ರಭಾಶಣಮ್ ನಲ್ಲಿ 'ಎ'ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ಸುಧಾಸರಸ್ವತಿ ಸಿ.ಎಚ್ . ಸಂಸ್ಕೃತೋತ್ಸವದ ಪ್ರಶ್ನೊತ್ತರಿಯಲ್ಲಿ 'ಎ' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ವಿವೇಕ .ಎಸ್ .ಭಟ್ . ಸಂಸ್ಕೃತೋತ್ಸವದ ಅಕ್ಷರಶ್ಲೊಕಮ್ ನಲ್ಲಿ 'ಎ'ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ಕು.ಪೂಜಾ.ಕೆ ಸಂಸ್ಕೃತೋತ್ಸವದ ಉಪನ್ಯಾಸ ರಚನೆಯಲ್ಲಿ 'ಎ'ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ಶ್ರೀನಂದಾ.ಎಮ್. ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಎಲ್ಲರಿಗೂ ನಮ್ಮ ಶಾಲಾ ಪರವಾಗಿ ಅಭಿನಂದನೆಗಳು .
Thursday, June 20, 2019
ವಾಚನ ವಾರ ಆಚರಣೆ
ಎಡನೀರು: ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜೂನ್ 19 ತಾರೀಕಿನಂದು ವಾಚನ ವಾರವನ್ನು ಉದ್ಘಾಟಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಮಧುಸೂದನನ್ ಪಿ.ಎನ್ ವರು ಉದ್ಘಾಟಿಸಿದರು. ಪಿ.ಎನ್ ಪಣಿಕ್ಕರ್ ಅವರ ನೆನಪಿನ ಅಂಗವಾಗಿ ಆಚರಿಸುವ ವಾಚನ ವಾರದ ಉದ್ದೇಶವನ್ನು ಮಕ್ಕಳಿಗೆ ತಿಳಿಸಿದರು. ಬಿ .ಆರ್ .ಸಿ. ಕಾಸರಗೋಡಿನ ಪ್ರತಿನಿಧಿಯಾಗಿ ಬಂದಂತಹ ಸುರೇಶ್ ಕುಮಾರ್ ಅವರು ಮಕ್ಕಳಿಗೆ ಓದುವಿನ ಮಹತ್ವ ಹೇಳಿದರು ಹಾಗೆ ಪುಸ್ತಕವನ್ನು ನೀಡಿದರು..
Thursday, June 6, 2019
ಎಡನೀರು :06/06/19 ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ನಡೆಯಿತು.ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಮಾಜಿ ಸೈನಿಕನ ಶ್ಯಾಮ್ ರಾಜ ಅವರು ಈ ವರ್ಷವೂ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ,ಮಕ್ಕಳಿಗೆ ಶುಭ ಹಾರೈಸಿದರು. ಮುಖ್ಯೋಪಾಧ್ಯಾಯರಾದ ಮಧುಸೂದನ್ ವರು , ಶಿಕ್ಷಕರಾದ ವೆಂಕಟಕೃಷ್ಣ ಹಾಗೂ ಜ್ಯೋತಿ ಲಕ್ಷ್ಮಿ ಯವರು ಮಕ್ಕಳಿಗೆ ಶುಭ ಹಾರೈಸಿದರು ಈ ಸಂದರ್ಭದಲ್ಲಿ ಸಂಸ್ಕೃತ ಸ್ಕಾಲರ್ ಶಿಪ್ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಯು.ಎಸ್.ಎಸ್ ಪರೀಕ್ಷೆ ಸ್ಕಾಲರ್ ಶಿಪ್ ಗಳಿಸಿದ ಶ್ಯಾಮ್ ಸುಬ್ರಹ್ಮಣ್ಯ ಶರ್ಮಾ ಅವನನ್ನು ಸನ್ಮಾನಿಸಲಾಯಿತು.
Saturday, February 9, 2019
'ಕಲಿಕೋತ್ಸವ' ನಮ್ಮ ಶಾಲೆಯಲ್ಲಿ
ಎಡೆನೀರು: ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಲಿಕೋತ್ಸವ ಇದೇ ಶುಕ್ರವಾರ ಜರಗಿತು. ಚೆಂಗಲ ಪಂಚಾಯತ್ ಉಪಾಧ್ಯಕ್ಷೆಯಾದ ಶ್ರೀಮತಿ ಶಾಂತಕುಮಾರಿ ಟೀಚರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಇಂತಹ ಕಾರ್ಯಕ್ರಮಗಳು ಪರಿಣಾಮಕಾರಿ ಎಂದು ಹೇಳಿದರು . 7ನೇ ತರಗತಿ ವಿದ್ಯಾರ್ಥಿಗಳು ರಚಿಸಿದ ಇಂಗ್ಲೀಷ್ ಮ್ಯಾಗಜಿನ್ ' ಡ್ರಿಝಿಲ್ 'ನ್ನು ಶಾಂತಕುಮಾರಿ ಟೀಚರ್ ಬಿಡುಗಡೆಗೊಳಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶಾರದಾ ಅಡೆಕೋಡ್ಲು ರವರು ಅಧ್ಯಕ್ಷರಾಗಿದ್ದರು. ಕಾಸರಗೋಡು ಬಿ.ಆರ್.ಸಿ ಯ ಸಂಯೋಜಕಿಯಾದ ವೀಣಾ ಕಲಿಕೋತ್ಸವದ ಉದ್ದೇಶಗಳನ್ನು ಹೇಳಿದರು . ಸಹ ಸಂಚಾಲಕರಾದ ಮಧುಸೂಧನನ್ ರವರು ಶುಭಾಶಂಸನೆಗೈದರು. ಕಾರ್ಯಕ್ರಮದಲ್ಲಿ ಎಸ್.ಎಮ್.ಸಿ ಸದಸ್ಯರು ,ಪಿ.ಟಿ.ಎ ,ಎಮ್.ಪಿ.ಟಿ .ಎ ಅಧ್ಯಕ್ಷರು ಹಾಗೂ ಸದಸ್ಯರೂ ಉಪಸ್ಥಿತರಿದ್ದರು. ಗಣಿತ,ವಿಜ್ಞಾನ, ಭಾಷೆ, ಸಮಾಜ ವಿಜ್ಞಾನ ಹೀಗೆ ಹಲವಾರು ವಿಷಯಗಳಲ್ಲಿ ವಿದ್ಯಾರ್ಥಿಗಳು ಪ್ರತಿಭೆಯನ್ನು ಪ್ರದರ್ಶಿಸಿದರು. ವಿದ್ಯಾರ್ಥಿನಿ ಅನನ್ಯ ಸಿ.ಎಚ್ ಕಾರ್ಯಕ್ರಮವನ್ನು ನಿರೂಪಿಸಿದಳು. ಪ್ರಜ್ಞಾ ಸ್ವಾಗತಿಸಿ,ವಿದ್ಯಾರ್ಥಿ ಶ್ಯಾಮ ಸುಬ್ರಹ್ಮಣ್ಯ ವಂದಿಸಿದನು.
Thursday, January 31, 2019
ಕಲಿಕೋತ್ಸವ 2018-19
ನಮ್ಮ ಶಾಲೆಯ ಕಲಿಕೋತ್ಸವ 08 ಫೆಬ್ರವರಿ 2019 ರಂದು ನಡೆಸಲು ತೀರ್ಮಾನ ತೆಗೆದುಕೊಳ್ಳುವುದು. ಪಂಚಾಯತ್ ಉಪಾಧ್ಯಕ್ಷೆ ಶಾಂತ ಕುಮಾರಿಯವರು ಮುಖ್ಯಅತಿಥಿಯಾಗಿ ಭಾಗವಹಿಸುವರು.
Subscribe to:
Posts (Atom)