" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Monday, December 1, 2014

ಇರಿಯಣ್ಣಿಯಲ್ಲಿ ಜರುಗಿದ ಕಾಸರಗೋಡು ಉಪಜಿಲ್ಲಾ ವಿದ್ಯಾರಂಗ ಸಾಹಿತ್ಯೋತ್ಸವ ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮುಖ್ಯಶಿಕ್ಷಕಿಯವರೊಂದಿಗೆ ....


Monday, October 20, 2014

2014-15 ನೇ ಸಾಲಿನ ಶಾಲಾಯುವಜನೋತ್ಸವವು ಅಕ್ಟೋಬರ್ 20,21 ರಂದು ಯಶಸ್ವಿಯಾಗಿ ಜರುಗಿತು. ಶಾಲಾ ಮುಖ್ಯ ಶಿಕ್ಷಕಿ ,ಶ್ರೀಮತಿ ಶಾರದ ಅಡೆಕ್ಕೊಡ್ಲು ರವರು ಉದ್ಘಾಟನಾ ಭಾಷಣ ಮಾಡಿದರು. ಎರಡು ದಿವಸಗಳ ವಿದ್ಯಾರ್ಥಿ ,ವಿದ್ಯಾರ್ಥಿನಿಯರ  ಸಾಂಸ್ಕೃತಿಕ ಕಲಾ ಪ್ರದರ್ಶನ ಜನಮನ ಸೆಳೆ ಯಿತು . 


                                       






ಎಡನೀರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿಯೋಜನೆಯ ಸ್ವಾಸ್ಥ ಸಂಕಲ್ಪ ಹಾಗೂ ಪರಿಸರ ಜಾಗ್ರತಿ ಅಭಿಯಾನದ ಕಾರ್ಯಕ್ರಮವು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ 14.10.14 ರಂದು ಜರಗಿತು.ಸಭೆಯಅಧ್ಯಕ್ಷತೆಯನ್ನು
ಶಾಲಾಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಶಾರದ ಅಡೆಕ್ಕೊಡ್ಲು ಇವರು ವಹಿಸಿದರು. ಗ್ರಾಮಾಭಿವೃದ್ಧಯೋಜನೆಯ ಕಾಸರಗೋಡು ವಿಭಾಗದ ಸಂಯೋಜಿಕರಾದ ಶ್ರೀಮತಿ ಶಿವಲಕ್ಮಿ ಇವರು ಶ್ರೀ ಕ್ಷೇತ್ರದ ವಿವಿಧ ಯೋಜನೆಗಳನ್ನು ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದರು. ಸಂಪನ್ಮೂಲವ್ಯಕ್ತಿಗಳಾದ ರಾಜನ್ ಮುಳಿಯಾರು ಇವರು ಮಧ್ಯಪಾನ ಕೆಡುಕುಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಗಳನ್ನು ನೀಡಿದರು. ಹಿರಿಯ ಅಧ್ಯಾಪಿಕೆಯಾದ ಶಾಂತ ಕುಮಾರಿ ಟೀಚರ್ ಸ್ವಾಗತಿಸಿದರು. ಅದ್ಯಾಪಕರಾದ ವೆಂಕಟಕೃಷ್ಣ ಇವರು ಧನ್ಯವಾದವನ್ನು ಸಮರ್ಪಿಸಿದರು. ಅಭಿವೃದ್ಧಿ ಯೋಜನೆಯ ಎಡನೀರು ಘಟಕದ ರಾಜೀವಿಯವರು ಸಭೆಯಲ್ಲಿ ಪಾಲ್ಗೊಂಡರು.

Friday, October 17, 2014

School level science,maths,social science, & IT.Fair

Inauguration of science magazine&maths magazine

Our school former principal Rajendra Kalluraya visited to our school fairs
IT multimedia competition