" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Tuesday, June 5, 2018

ವಿಶ್ವ ಪರಿಸರ ದಿನ ಆಚರಣೆ

ಎಡನೀರು : ಜೂನ್ 5 ರಂದು ನಮ್ಮ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಪರಿಸರ ಸಂರಕ್ಷಣಾ ಮನೋಭಾವ ಕೇವಲ ಒಂದು  ದಿನಕ್ಕೆ ಮೀಸಲಿಡಬಾರದು  ಹಾಗೂ  ನಿತ್ಯಜೀವನದಲ್ಲಿ  ಪರಿಸರ ಪ್ರೇಮ ಅಗತ್ಯ ವೆಂದು  ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಅಡೆಕೋಡ್ಲು ರವರು ಮಕ್ಕಳಿಗೆ ಹೇಳಿದರು. ಕಾರ್ಯಕ್ರಮದಲ್ಲಿ ಅತಿಥಿ ಯಾಗಿ ಬಂದಂತಹ  ಚೆಂಗಳ ಪಂಚಾಯತು  ಉಪಾಧ್ಯಕ್ಷರಾದ ಶ್ರೀಮತಿ ಶಾಂತ ಕುಮಾರಿ ಯವರು ಮಕ್ಕಳಿಗೆ ಸಸಿಯನ್ನು ವಿತರಿಸಿ ವಾತಾವರಣದ ಸಂರಕ್ಷಣೆಯಲ್ಲಿ ಅರಣ್ಯ ಸಂಪತ್ತಿನ ಪಾತ್ರದ ಕುರಿತು ಮಕ್ಕಳಿಗೆ  ತಿಳಿಸಿದರು ನಂತರ 9ನೇ ತರಗತಿಯ ಕು. ವೈದೇಹಿ 'ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಯಾಗಿ ನನ್ನ ಪಾತ್ರ' ಎಂಬ ಕುರಿತಂತೆ ವಿಚಾರ ಸಂಕಿರಣ ವನ್ನು ಮಂಡಿಸಿದಳು. ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಯಿತು




Friday, June 1, 2018

ಶಾಲಾಪ್ರವೇಶೋತ್ಸವ 2018-19

ಎಡನೀರು : ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆ ಎಡನೀರಿನಲ್ಲಿ  ಜೂನ್ ಒಂದನೇ ತಾರೀಕಿನಂದು ಶಾಲಾಪ್ರವೇಶೋತ್ಸವವು ಜರಗಿತು.ಮಕ್ಕಳನ್ನುಮೆರೆವಣಿಗೆಯೊಂದಿಗೆ ಪ್ರವೇಶೋತ್ಸವದ ಗೀತೆಯನ್ನು ಕೇಳಿಸುವ ಮುಖಾಂತರ ಶಾಲೆಗೆ ಸ್ವಾಗತಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶಾರದ ಎಡೆಕೋಡ್ಲುರವರು ಮಕ್ಕಳಿಗೆ ಶುಭ ಹಾರೈಸಿದರು. ನಮ್ಮ ಶಾಲಾಪ್ರವೇಶೋತ್ಸವದ ಉದ್ಘಾಟನೆಯನ್ನು ಪಂಚಾಯತು ಉಪಾಧ್ಯಕ್ಷೆ  ಶ್ರೀಮತಿ ಶಾಂತಕುಮಾರಿಯವರು ನೂತನ  ವಿದ್ಯಾರ್ಥಿಗಳಿಗೆ ಪುಸ್ತಕ,ಪೆನ್ನನ್ನೂ ನೀಡಿ ಶುಭ ಹಾರೈಸಿದರು . ಶಾಲಾ ಸಹ ಶಿಕ್ಷಕ ವೆಂಕಟಕೃಷ್ಣ ಕೆ ಯವರು ಶಿಕ್ಷಣಮಂತ್ರಿಯವರ ಸಂದೇಶವನ್ನು ವಾಚಿಸಿದರು  ನಂತರ ಮಕ್ಕಳಿಗೆ ಸಿಹಿಯನ್ನು ಹಂಚಲಾಯಿತುಶಾಲಾ ಅಧ್ಯಾಪಕರೂ, ಸಿಬ್ಬಂದಿ ವರ್ಗದವರೂ ಉಪಸ್ಥಿತರಿದ್ದರು.




Friday, October 27, 2017

ಉಪಜಿಲ್ಲಾಮಟ್ಟದ ಶಾಸ್ತ್ರಮೇಳದಲ್ಲಿ ಪ್ರಥಮ

ಕಾಸರಗೋಡು : ಜಿ.ವಿ. ಎಚ್ ಎಚ್ ಎಸ್ ಮೊಗ್ರಾಲ್ ಪುತ್ತೂರಿನಲ್ಲಿ   ಜರಗಿದ ಕಾಸರಗೋಡು ಉಪಜಿಲ್ಲಾ  ಮಟ್ಟದ  ಶಾಸ್ತ್ರಮೇಳದ ಹೈಸ್ಕೂಲ್   ವಿಭಾಗದ ಐ .ಟಿ  ಕನ್ನಡ ಟೈಪಿಂಗ್ ಸ್ಪರ್ಧೆಯಲ್ಲಿ  ವೈದೇಹಿ ಕೆ    'ಎ ' ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಪಡೆದು  ಜಿಲ್ಲಾ ಮಟ್ಟ ಕ್ಕೆ ಆಯ್ಕೆ ಯಾಗಿದ್ದಾಳೆ. ಈಕೆ   ಸ್ವಾಮೀಜಿಸ್  ಹೈಸ್ಕೂಲ್ ಎಡನೀರಿನ 8ನೇ  ತರಗತಿಯ ವಿದ್ಯಾರ್ಥಿನಿ  . ಎಡನೀರಿನ  ಕಳೇರಿ  ಗೋಪಾಲಕೃಷ್ಣ  ಹೇರಳ. ಕೆ  ಹಾಗೂ  ರಾಜೇಶ್ವರಿ.ಕೆ  ದಂಪತಿಯವರ ಸುಪುತ್ರಿ.