10-02-2015 ನೇ ಮಂಗಳವಾರ ನಮ್ಮ ಗ್ರಾಮ ಪಂಚಾಯತ್ ವತಿಯಿಂದ ಶಾಲೆಯ 8,9 ಹಾಗೂ 10ನೇ ತರಗತಿಯಲ್ಲಿ ಕಲಿಯುತ್ತಿರುವ 36 ಎಸ್ಸಿ (SC) ಮಕ್ಕಳಿಗೆ ಮೇಜು ಹಾಗೂ ಕುರ್ಚಿಯನ್ನು ವಿತರಿಸಲಾಯಿತು ...ಮೊದಲು ನಡೆದ ಸಭೆಯಲ್ಲಿ ಹಿರಿಯ ಅಧ್ಯಾಪಿಕೆ ಶಾಂತ ಕುಮಾರಿ ಟೀಚರ್ ಎಲ್ಲರನ್ನು ಸ್ವಾಗತಿಸಿದರು. ಶಾಲಾ ಮುಖ್ಯಶಿಕ್ಸಕಿಯವರು ಪಂಚಾಯತ್ ನ ಈ ಯೋಜನೆಯನ್ನು ಶ್ಲಾಘಿಸಿದರು..ಸಭೆಯಲ್ಲಿ ಶಾಲಾ ಪಿ .ಟಿ .ಎ ಅಧ್ಯಕ್ಷರು ,ಎಸ್. ಅರ್ . ಜಿ ಸಂಚಾಲಕರು ,ಎಲ್ಲಾ ಶಿಕ್ಷಕರು, ಸಿಬ್ಬಂಧಿವರ್ಗ, ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು ...
Thursday, February 12, 2015
"ಪರಿಸರದಲ್ಲಿ ಮರ ಗಿಡಗಳ ಹಾಗೂ ಪ್ರಾಣಿ ಪಕ್ಷಿ ಗಳ ಮಹತ್ವ"
10-02-2015 ನೇ ಮಂಗಳವಾರ ಕೇರಳ ಅರಣ್ಯ ಹಾಗೂ ವನ್ಯಮೃಗ ಸಂರಕ್ಷಣಾ ಇಲಾಖೆಯ ವತಿಯಿಂದ " ಪರಿಸರದಲ್ಲಿ ಮರ ಗಿಡಗಳ ಹಾಗೂ ಪ್ರಾಣಿ ಪಕ್ಷಿ ಗಳ ಮಹತ್ವ" ಎಂಬ ವಿಷಯದ ಕುರಿತು ಮಕ್ಕಳಿಗೆ ವಿಚಾರ ಗೋಷ್ಠಿ ಯನ್ನು ಹಮ್ಮಿ ಕೊಳ್ಳಲಾಯಿತು... ಈ ವಿಚಾರ ಗೋಷ್ಠಿಯಲ್ಲಿ ಜಿಲ್ಲಾ ಅರಣ್ಯಾಧಿಕಾರಿ ಶ್ರೀ ಮುರಳೀಧರನ್ ರವರು ಹಾಜರಿದ್ದು ,ಸಂಪನ್ಮೂಲ ವ್ಯಕ್ತಿ ಶ್ರೀ ಭಾಸ್ಕರ ಬೆಳ್ಳೂರು ರವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು..
Thursday, January 15, 2015
ಸ್ವಾಮಿ ವಿವೇಕಾನಂದರವರ 152ನೇ ಜನ್ಮದಿನೋತ್ಸವ ಆಚರಣೆ
ಸ್ವಾಮಿ ವಿವೇಕಾನಂದ ರವರ 152ನೇ ಜನ್ಮ ದಿನೋತ್ಸವವನ್ನು ನಮ್ಮ ಶಾಲಾ ಸಮಾಜವಿಜ್ಞಾನ ಕ್ಲಬ್ ನ ನೇತೃತ್ವ ದಲ್ಲಿ ನಡೆಸಲಾಯಿತು. ನಮ್ಮ ಶಾಲಾ ಮುಖ್ಯ ಶಿಕ್ಷಕಿಯವರು ಸ್ವಾಮಿ ವಿವೇಕಾನಂದ ರವರ" ಉತ್ತಮನಾಗು.. ಉಪಕಾರಿಯಾಗು " ಎಂಬ ವಿಚಾರವನ್ನು ತಮ್ಮಭಾಷಣ ದಲ್ಲಿ ಹೇಳುವ ಮೂಲಕ ಮಕ್ಕಳಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯ ಪರಿಕಲ್ಪನೆ ಯನ್ನು ಮೂಡಿಸಿದರು . ನಂತರ ಚಕ್ರವರ್ತಿ ಸೂಲಿಬೆಲೆ ಯವರ "ಜಾಗೋ ಭಾರತ್ "ನ ವೀಡಿಯೋ ಪ್ರದರ್ಶಿಸಲಾಯಿತು... ಮಕ್ಕಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು ...
Thursday, January 8, 2015
Wednesday, January 7, 2015
Wednesday, December 31, 2014
Subscribe to:
Posts (Atom)