" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Tuesday, October 2, 2018

ಅಕ್ಟೋಬರ್ 2 ಗಾಂಧಿ ಜಯಂತಿ

ಎಡನೀರು: ಅಕ್ಟೋಬರ್ 2 ಗಾಂಧಿ ಜಯಂತಿಯನ್ನು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಜೃಂಭಣೆಯಿಂದ  ಆಚರಿಸಲಾಯಿತು. ಬೆಳಗ್ಗೆ 9:30ಕ್ಕೆ ಸರಿಯಾಗಿ ಸಭೆ ಸೇರಲಾಯಿತು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯೋಪಾಧ್ಯಾಯಿನಿ ಶಾರದ ಅಡೆಕೋಡ್ಲುರವರು  ಶಾಲಾ ಪರಿಸರ ಸ್ವಚ್ಛವಾಗಿಟ್ಟುಕೊಳ್ಳವುದು ನಮ್ಮೆಲ್ಲರ ಕರ್ತವ್ಯ ಹಾಗೂ ಗಾಂಧಿ ತತ್ವ ನಮಗೆಲ್ಲಾ ಅನುಕರಣೀಯ ಎಂದು ಹೇಳಿದರು. ನಂತರ ಶಾಲಾ ಶಿಕ್ಷಕರ ಹಾಗೂ ಸಿಬ್ಬಂದಿ ವರ್ಗದ ಮಾರ್ಗದರ್ಶನದಲ್ಲಿ ಮಕ್ಕಳು ಶಾಲಾ ಪರಿಸರವನ್ನು ಸ್ವಚ್ಛ ಗೊಳಿಸಿದರು. ಕೊನೆಯಲ್ಲಿ ಲಘು ಉಪಹಾರ ಹಾಗೂ ಪಾನೀಯ ವ್ಯವಸ್ಥೆಯನ್ನು ಮಾಡಲಾಗಿತ್ತು.

Friday, September 14, 2018

ಲಿಟ್ಲ್ ಕೈಟ್ಸ್ ಏಕದಿನ ಶಿಬಿರ




 

ಎಡನೀರು:ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತಾರೀಕು 04-08-2018 ರಂದು ಲಿಟ್ಲ್ ಕೈಟ್ಸ್ ನ ಶಾಲಾ ಮಟ್ಟದ ಶಿಬಿರವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಾರದಾ ಅಡೆಕೋಡ್ಲುರವರು ಉದ್ಘಾಟಿಸಿದರು.ಒಟ್ಟಾಗಿ 21 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು.ಭಾರತಿ ಟೀಚರ್ ಹಾಗೂ ರಾಮಮೋಹನ ಕೆದಿಲ್ಲಾಯರು ಈ ಶಿಬಿರದ ಸಂಪೂರ್ಣ ನೇತೃತ್ವವನ್ನು ವಹಿಸಿದ್ದರು. ಶಿಬಿರದಲ್ಲಿ ಭಾರತಿ ಟೀಚರ್ ರವರು ಒಂದು ಎನಿಮೇಶನ್ ವೀಡಿಯೋವನ್ನು ಹೇಗೆ ಎಡಿಟ್ ಮಾಡಬಹುದು ಎಂದು ತಿಳಿಸಿಕೊಟ್ಟರು.ಮಾತ್ರವಲ್ಲದೇ ವೀಡಿಯೋಗೆ ಹೇಗೆ ಧ್ವನಿಯನ್ನು ಸೇರಿಸಬಹುದೆಂದುತಿಳಿಸಿದರು.
ಸರಿಸುಮಾರು 11.00 ಗಂಟೆಗೆ ಲಘು ಉಪಹಾರವನ್ನು ವಿತರಿಸಿದರು.ತದನಂತರ ಲಿಟ್ಲ್ ಕೈಟ್ಸ್ ನ ಉಳಿದ ಚಟುವಟಿಕೆಗಳನ್ನು ಮಾಡಲಾಯಿತು. ಭೋಜನವು ರುಚಿಕರವಾಗಿತ್ತು.ಭೋಜನದನಂತರ ಭಾರತಿ ಟೀಚರವರು ಲಿಟ್ಲ್ ಕೈಟ್ಸ್ ನ ಬಾಕಿ ಉಳಿದ ಚಟುವಟಿಕೆಗಳನ್ನು ಪ್ರಾರಂಭಿಸಿದರು.ಮಧ್ಯಾಹ್ನದ ನಂತರ ಓಪನ್ ಶೋಟ್ ವೀಡಿಯೋ ಎಡಿಟರ್ ಎಂಬ ಸೋಫ್ಟ್ ವೇರ್ ನಲ್ಲಿ ತಯಾರಿಸಿದ ಒಂದು ಎನಿಮೇಶನ್ ವೀಡಿಯೋಗೆ ಶೀರ್ಷಿಕೆ ನೀಡಲಾಯಿತು.ಪ್ರತಿಯೋರ್ವ ವಿದ್ಯಾರ್ಥಿಯೂ ಸಹ ತಮ್ಮ ತಮ್ಮ ಎನಿಮೇಶನ್ ವೀಡಿಯೋಗೆ ಶೀರ್ಷಿಕೆಯನ್ನು ನೀಡಿದರು.ತದನಂತರ ಎನಿಮೇಶನ್ ವೀಡಿಯೋವನ್ನು ಎಕ್ಸ್ ಪೋರ್ಟ್ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. ವೀಡಿಯೋವನ್ನು ಎಕ್ಸ್ ಪೋರ್ಟ್ ಮಾಡುವುದರೊಂದಿಗೆ ಲಿಟ್ಲ್ ಕೈಟ್ಸ್ ನ ಶಾಲಾ ಮಟ್ಟದ ಶಿಬಿರವು ಮುಕ್ತಾಯಗೊಂಡಿತು.ಕೊನೆಯಲ್ಲಿ ಕೆಲವು ವಿದ್ಯಾರ್ಥಿಗಳು ಈ ಶಿಬಿರದ ಕುರಿತಾದ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.ಸಂಜೆಯೂ ಸಹ ವಿದ್ಯಾರ್ಥಿಗಳಿಗೆ ಲಘು ಉಪಹಾರವನ್ನು ವಿತರಿಸಲಾಯಿತು.
ಒಟ್ಟಿನಲ್ಲಿ ಈ ಶಿಬಿರದಿಂದ  ಹಲವಾರು ಸೋಫ್ಟ್ ವೇರ್ ಗಳನ್ನು ಪರಿಚಯಿಸಲು ಸಾಧ್ಯವಾಗಿದೆ.ಮಾತ್ರವಲ್ಲದೇ ಒಂದು ವೀಡಿಯೋವನ್ನು ಯಾವ ರೀತಿಯಲ್ಲಿ ಎಡಿಟ್ ಮಾಡಬಹುದು,ಯಾವ ರೀತಿಯಲ್ಲಿ ಆ ವೀಡಿಯೋಗೆ ಶಬ್ದವನ್ನು ನೀಡಬಹುದು ಎಂಬುದನ್ನು ತಿಳಿಯಲು ಸಾಧ್ಯವಾಗಿದೆ.ಇದಲ್ಲದೇ ಪ್ರತಿಯೊಂದು ಸೋಫ್ಟ್ ವೇರ್ ನಲ್ಲಿರುವ ವಿವಿಧ ರೀತಿಯ ಟೂಲುಗಳನ್ನು ಪರಿಚಯಿಸಿಕೊಳ್ಳಲು ಈ ಶಿಬಿರವು ಸಹಾಯಕವಾಗಿದೆ.


Monday, August 27, 2018

ಸ್ವಾತಂತ್ರ್ಯ ದಿನ ಆಚರಣೆ

ಎಡನೀರು: ಅಗೋಸ್ತು 15 ರಂದು ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಬ್ರಮದಲ್ಲಿ ಆಚರಣೆ ಮಾಡಲಾಯಿತು.ಬೆಳಗ್ಗೆ ವರುಣನ ಅಡಚಣೆ ಇದ್ದರೂ, 9:40 ಕ್ಕೆ ಸರಿಯಾಗಿ ಧ್ವಜಾರೋಹಣವನ್ನು ನಮ್ಮ ಗೌರವಾನ್ವಿತ ಪ್ರಾಂಶುಪಾಲರಾದ ಶ್ರೀ ನಾರಾಯಣ್ ರವರು ನಡೆಸಿ ಮಕ್ಕಳಿಗೆ ಹಿತವಚನವನ್ನು ಹೇಳಿದರು. ಗೌರವಾನ್ವಿತ ಮುಖ್ಯೋಪಾಧ್ಯಾಯಿನಿ ಶಾರದಾ ಅಡೆಕೋಡ್ಲುರವರು ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವಲ್ಲಿ ಯಶಸ್ವಿಯಾದರು.
       ನಂತರ ನಡೆದ ಭಾಷಣ,  ಪ್ರಬಂಧ,ಸ್ವಾತಂತ್ರ್ಯ ದಿನಾಚರಣಾ ರಸಪ್ರಶ್ನೆ ,ದೇಶಭಕ್ತಿ ಹಾಡಿನ ಸ್ಪರ್ಧೆಗಳಲ್ಲಿ ಮಕ್ಕಳು ಆಸಕ್ತಿ ಯಿಂದ ಭಾಗವಹಿಸಿದರು.ಕಾರ್ಯಕ್ರಮದ  ಕೊನೆಗೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಎಲ್ಲರಿಗೂ ಸಿಹಿತಿಂಡಿ ವಿತರಿಸಿ,12:30 ಕ್ಕೆ  ಕಾರ್ಯಕ್ರಮಕ್ಕೆ ವಿರಾಮ ನೀಡಲಾಯಿತು.

ಚಾಂದ್ರ ದಿನ ಆಚರಣೆ

ಜುಲೈ 23 ನೇ ಸೋಮವಾರ ನಮ್ಮ ಶಾಲೆಯಲ್ಲಿ ಚಾಂದ್ರ ದಿನ ಆಚರಿಸಲಾಯಿತು. ಜುಲೈ 21 ರ ದಿನದ ಮಹತ್ವದ ಕುರಿತು ಮುಖ್ಯೋಪಾಧ್ಯಾಯಿನಿ ತಿಳಿಸಿದರು. ಚಾಂದ್ರ ಯಾನದ ವೀಡಿಯೋ ಪ್ರದರ್ಶಿಸಲಾಯಿತು. ಹೈಸ್ಕೂಲು ಮಟ್ಟದಲ್ಲಿ ಚಾಂದ್ರದಿನ ಸೆಮಿನಾರ್ ಹಾಗೂ ಎಲ್ಲಾ ವಿಭಾಗದಲ್ಲಿ ಚಾಂದ್ರದಿನದ ರಸಪ್ರಶ್ನೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆ ಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

Monday, July 2, 2018

ರಾಷ್ಟ್ರೀಯ ವೈದ್ಯ ದಿನ ಆಚರಣೆ


ಎಡನೀರು : ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ  'ರಾಷ್ಟ್ರೀಯ ವೈದ್ಯ ದಿನ : ಜೂನ್ 1  ಆಚರಣೆಯು ಮರುದಿನ  ಸೋಮವಾರ ನಡೆಯಿತು.  ಸಭೆಯಲ್ಲಿ ಹಿರಿಯ ಶಿಕ್ಷಕಿ  ಜ್ಯೋತಿಲಕ್ಷ್ಮಿ  ಯವರು ಮಕ್ಕಳಿಗೆ ವೈದ್ಯ ದಿನದ ವಿಶೇಷತೆಯನ್ನು ಹೇಳಿದರು.  ವಿಜ್ಞಾನ ಕ್ಲಬ್ ನ ಮಕ್ಕಳು ಔಷದೀಯ ಸಸ್ಯಗಳ ಕುರಿತು ತಯಾರಿಸಿದ ಸೆಮಿನಾರ್ ನ್ನು   ನಮ್ಮ ಶಾಲೆಯ 9ನೇ ತರಗತಿ  ವಿದ್ಯಾರ್ಥಿನಿ  ಕು. ವೈದೇಹಿ ಮಂಡಿಸಿದಳು.  ನಂತರ ಕಾರ್ಯಕ್ರದಲ್ಲಿ ವಿಜ್ಞಾನ ಕ್ಲಬ್ ನ ಮಕ್ಕಳು ಸಂಗ್ರಹಿದ ಅನೇಕ ವಿವಿಧ ಬಗೆಯ  ಔಷದೀಯ ಸಸ್ಯಗಳನ್ನು  ಪ್ರದರ್ಶನಕ್ಕಿಡಲಾಯಿತು. ಮಕ್ಕಳು ಆಸಕ್ತಿಯಿಂದ ವೀಕ್ಷಿಸಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕ- ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.


Saturday, June 23, 2018

ಯೋಗಯುಕ್ತ-ರೋಗಮುಕ್ತ :ಶಾರದಾ ಎಡಕೊಡ್ಲು





ಎಡನೀರು: ಸ್ವಾಮೀಜಿಸ್  ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಶ್ವ ಯೋಗ ದಿನ ಆಚರಣೆಯನ್ನು  21ರಂದು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ  ಮುಖ್ಯೋಪಾಧ್ಯಾಯಿನಿ ಶಾರದಾ ಎಡಕೊಡ್ಲುರವರು  ಆರೋಗ್ಯವೇ ಭಾಗ್ಯ ಎಂಬ  ನಾಣ್ಣುಡಿಯನ್ನು ನೆನಪಿಸಿ ಯೋಗ ಒಂದು ದಿನಕ್ಕೆ ಮಾತ್ರ ಮೀಸಲಿರದೆ ದಿನನಿತ್ಯ ಯೋಗ ಮಾಡಿದರೆ ನಮ್ಮ ಆರೋಗ್ಯ ವನ್ನು ಕಾಪಾಡಿಕೊಳ್ಳ ಬಹುದು ಹಾಗೆಯೇ ಯೋಗಯುಕ್ತ-ರೋಗಮುಕ್ತ ಎಂದು ಮಕ್ಕಳಿಗೆ  ಹೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ  ಒಂದು ದಿನದ ಯೋಗ ತರಬೇತಿಯನ್ನು ಶ್ರೀಮತಿ ಕಲಾ ಹಾಗೂ  ಶ್ರೀ ವಿಶ್ವನಾಥ ಭಟ್ ರವರು ನಡೆಸಿ ಕೊಟ್ಟರು.  ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ಹಾಗೂ ಸಿಬ್ಬಂದಿ ಗಳೂ  ಭಾಗವಹಿಸಿದ್ದರು.  


ವಾಚನಾ ವಾರ ಆಚರಣೆ

ವಾಚನಾ ವಾರವನ್ನು ನಮ್ಮ ಶಾಲೆಯಲ್ಲಿ  19 ರಂದು ಮುಖೋಪಾಧ್ಯಾಯಿನಿ  ಶಾರದಾ ಎಡಕೊಡ್ಲು ರವರು ಉದ್ಘಾಟಿಸಿದರು.  ಕೇರಳ ರಾಜ್ಯದಲ್ಲಿ ಗ್ರಂಥಾಲಯ ಚಳುವಳಿಯ ಪಿತಾಮಹವೆಂದೇ ಕರೆಯಲ್ಪಡುವ ಹಾಗೂ ಕೇರಳ ಗ್ರಂಥಾಶಾಲಾ ಸಂಘಮ್ ನ  ಸ್ಥಾಪಕರೂ ಆದ ಪಿ. ಎನ್ ಪಣಿಕ್ಕರ್  ರವರ  ಬಗ್ಗೆ  ಮಕ್ಕಳಿಗೆ ಹೇಳಿದರು . ನಮ್ಮಶಾಲೆಯಲ್ಲಿ  19ರಿಂದ 26 ರ ವರೆಗೆ ವಾಚನಾವಾರದ   ಅಂಗವಾಗಿ ಹಲವಾರು ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿದೆ . ಈ ಪ್ರಯುಕ್ತ  19-20 ರಂದು ವಾಚನಾ ಸ್ಪರ್ಧೆಯನ್ನು ಏರ್ಪಡಿಸಲಾಯಿತು.