" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Thursday, June 21, 2018

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ


ಎಡನೀರು : ಜೂನ್ 20 ರಂದು ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆ ಎಡನೀರಿನಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಯಲ್ಲಿ ಎಲ್ಲಾ ವಿಷಯಗಳಲ್ಲೂ ಎ+ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಾದ ಮಂಜುಶ್ರೀ ಶಿವಾನಿ ಬಿ.ಎಸ್ , ವೀಣಾಸುಮತಿ ಎ.ಎಸ್ ,ಅಂಬಿಕಾ ಸಿ .ಎಚ್ ,ಹಾಗೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಶುಭಶ್ರೀ ಲಕ್ಷ್ಮಿ  ಸಿ. ಎಚ್  , ನಮಿತಾ ವೈ ಎನ್ ಇವರನ್ನು ಶಾಲಾ ಅಧ್ಯಾಪಕ ಹಾಗೂ ಸಿಬ್ಬಂದಿ ಹಾಗೂ ಪಿ.ಟಿ .ಎ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಯು.ಎಸ್.ಎಸ್  ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದ  ಪೂಜಾ .ಕೆ  ಇವಳನ್ನೂ ಅಭಿನಂದಿಸಲಾಯಿತು. ಶಾಲಾ ಪ್ರಾಂಶುಪಾಲರಾದ ನಾರಾಯಣನ್. ಎ ಎನ್ ,  ಮುಖ್ಯೋಪಾಧ್ಯಾಯಿನಿ  ಶಾರದಾ ಎಡಕೊಡ್ಲು , ಎಂ.ಪಿ ಟಿ ಎ ಅಧ್ಯಕ್ಷೆ  ರಾಜೇಶ್ವರಿ , ಎಲ್ಲಾ ರಕ್ಷಕ- ಶಿಕ್ಷಕ  ವೃ೦ದ, ಸಿಬ್ಬಂದಿಗಳು ಶಾಲಾ  ಮಕ್ಕಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಇದೇ ದಿನ 2018 -19 ನೇ ಸಾಲಿನ ರಕ್ಷಕ- ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.



Tuesday, June 5, 2018

ವಿಶ್ವ ಪರಿಸರ ದಿನ ಆಚರಣೆ

ಎಡನೀರು : ಜೂನ್ 5 ರಂದು ನಮ್ಮ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಪರಿಸರ ಸಂರಕ್ಷಣಾ ಮನೋಭಾವ ಕೇವಲ ಒಂದು  ದಿನಕ್ಕೆ ಮೀಸಲಿಡಬಾರದು  ಹಾಗೂ  ನಿತ್ಯಜೀವನದಲ್ಲಿ  ಪರಿಸರ ಪ್ರೇಮ ಅಗತ್ಯ ವೆಂದು  ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಅಡೆಕೋಡ್ಲು ರವರು ಮಕ್ಕಳಿಗೆ ಹೇಳಿದರು. ಕಾರ್ಯಕ್ರಮದಲ್ಲಿ ಅತಿಥಿ ಯಾಗಿ ಬಂದಂತಹ  ಚೆಂಗಳ ಪಂಚಾಯತು  ಉಪಾಧ್ಯಕ್ಷರಾದ ಶ್ರೀಮತಿ ಶಾಂತ ಕುಮಾರಿ ಯವರು ಮಕ್ಕಳಿಗೆ ಸಸಿಯನ್ನು ವಿತರಿಸಿ ವಾತಾವರಣದ ಸಂರಕ್ಷಣೆಯಲ್ಲಿ ಅರಣ್ಯ ಸಂಪತ್ತಿನ ಪಾತ್ರದ ಕುರಿತು ಮಕ್ಕಳಿಗೆ  ತಿಳಿಸಿದರು ನಂತರ 9ನೇ ತರಗತಿಯ ಕು. ವೈದೇಹಿ 'ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಯಾಗಿ ನನ್ನ ಪಾತ್ರ' ಎಂಬ ಕುರಿತಂತೆ ವಿಚಾರ ಸಂಕಿರಣ ವನ್ನು ಮಂಡಿಸಿದಳು. ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಯಿತು




Friday, June 1, 2018

ಶಾಲಾಪ್ರವೇಶೋತ್ಸವ 2018-19

ಎಡನೀರು : ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆ ಎಡನೀರಿನಲ್ಲಿ  ಜೂನ್ ಒಂದನೇ ತಾರೀಕಿನಂದು ಶಾಲಾಪ್ರವೇಶೋತ್ಸವವು ಜರಗಿತು.ಮಕ್ಕಳನ್ನುಮೆರೆವಣಿಗೆಯೊಂದಿಗೆ ಪ್ರವೇಶೋತ್ಸವದ ಗೀತೆಯನ್ನು ಕೇಳಿಸುವ ಮುಖಾಂತರ ಶಾಲೆಗೆ ಸ್ವಾಗತಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶಾರದ ಎಡೆಕೋಡ್ಲುರವರು ಮಕ್ಕಳಿಗೆ ಶುಭ ಹಾರೈಸಿದರು. ನಮ್ಮ ಶಾಲಾಪ್ರವೇಶೋತ್ಸವದ ಉದ್ಘಾಟನೆಯನ್ನು ಪಂಚಾಯತು ಉಪಾಧ್ಯಕ್ಷೆ  ಶ್ರೀಮತಿ ಶಾಂತಕುಮಾರಿಯವರು ನೂತನ  ವಿದ್ಯಾರ್ಥಿಗಳಿಗೆ ಪುಸ್ತಕ,ಪೆನ್ನನ್ನೂ ನೀಡಿ ಶುಭ ಹಾರೈಸಿದರು . ಶಾಲಾ ಸಹ ಶಿಕ್ಷಕ ವೆಂಕಟಕೃಷ್ಣ ಕೆ ಯವರು ಶಿಕ್ಷಣಮಂತ್ರಿಯವರ ಸಂದೇಶವನ್ನು ವಾಚಿಸಿದರು  ನಂತರ ಮಕ್ಕಳಿಗೆ ಸಿಹಿಯನ್ನು ಹಂಚಲಾಯಿತುಶಾಲಾ ಅಧ್ಯಾಪಕರೂ, ಸಿಬ್ಬಂದಿ ವರ್ಗದವರೂ ಉಪಸ್ಥಿತರಿದ್ದರು.