ಎಡನೀರು: ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಶ್ವ ಯೋಗ ದಿನ ಆಚರಣೆಯನ್ನು 21ರಂದು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಶಾರದಾ ಎಡಕೊಡ್ಲುರವರು ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯನ್ನು ನೆನಪಿಸಿ ಯೋಗ ಒಂದು ದಿನಕ್ಕೆ ಮಾತ್ರ ಮೀಸಲಿರದೆ ದಿನನಿತ್ಯ ಯೋಗ ಮಾಡಿದರೆ ನಮ್ಮ ಆರೋಗ್ಯ ವನ್ನು ಕಾಪಾಡಿಕೊಳ್ಳ ಬಹುದು ಹಾಗೆಯೇ ಯೋಗಯುಕ್ತ-ರೋಗಮುಕ್ತ ಎಂದು ಮಕ್ಕಳಿಗೆ ಹೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಒಂದು ದಿನದ ಯೋಗ ತರಬೇತಿಯನ್ನು ಶ್ರೀಮತಿ ಕಲಾ ಹಾಗೂ ಶ್ರೀ ವಿಶ್ವನಾಥ ಭಟ್ ರವರು ನಡೆಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ಹಾಗೂ ಸಿಬ್ಬಂದಿ ಗಳೂ ಭಾಗವಹಿಸಿದ್ದರು.
Saturday, June 23, 2018
ಯೋಗಯುಕ್ತ-ರೋಗಮುಕ್ತ :ಶಾರದಾ ಎಡಕೊಡ್ಲು
ಎಡನೀರು: ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಶ್ವ ಯೋಗ ದಿನ ಆಚರಣೆಯನ್ನು 21ರಂದು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಶಾರದಾ ಎಡಕೊಡ್ಲುರವರು ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯನ್ನು ನೆನಪಿಸಿ ಯೋಗ ಒಂದು ದಿನಕ್ಕೆ ಮಾತ್ರ ಮೀಸಲಿರದೆ ದಿನನಿತ್ಯ ಯೋಗ ಮಾಡಿದರೆ ನಮ್ಮ ಆರೋಗ್ಯ ವನ್ನು ಕಾಪಾಡಿಕೊಳ್ಳ ಬಹುದು ಹಾಗೆಯೇ ಯೋಗಯುಕ್ತ-ರೋಗಮುಕ್ತ ಎಂದು ಮಕ್ಕಳಿಗೆ ಹೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಒಂದು ದಿನದ ಯೋಗ ತರಬೇತಿಯನ್ನು ಶ್ರೀಮತಿ ಕಲಾ ಹಾಗೂ ಶ್ರೀ ವಿಶ್ವನಾಥ ಭಟ್ ರವರು ನಡೆಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ಹಾಗೂ ಸಿಬ್ಬಂದಿ ಗಳೂ ಭಾಗವಹಿಸಿದ್ದರು.
ವಾಚನಾ ವಾರ ಆಚರಣೆ
ವಾಚನಾ ವಾರವನ್ನು ನಮ್ಮ ಶಾಲೆಯಲ್ಲಿ 19 ರಂದು ಮುಖೋಪಾಧ್ಯಾಯಿನಿ ಶಾರದಾ ಎಡಕೊಡ್ಲು ರವರು ಉದ್ಘಾಟಿಸಿದರು. ಕೇರಳ ರಾಜ್ಯದಲ್ಲಿ ಗ್ರಂಥಾಲಯ ಚಳುವಳಿಯ ಪಿತಾಮಹವೆಂದೇ ಕರೆಯಲ್ಪಡುವ ಹಾಗೂ ಕೇರಳ ಗ್ರಂಥಾಶಾಲಾ ಸಂಘಮ್ ನ ಸ್ಥಾಪಕರೂ ಆದ ಪಿ. ಎನ್ ಪಣಿಕ್ಕರ್ ರವರ ಬಗ್ಗೆ ಮಕ್ಕಳಿಗೆ ಹೇಳಿದರು . ನಮ್ಮಶಾಲೆಯಲ್ಲಿ 19ರಿಂದ 26 ರ ವರೆಗೆ ವಾಚನಾವಾರದ ಅಂಗವಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ . ಈ ಪ್ರಯುಕ್ತ 19-20 ರಂದು ವಾಚನಾ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ಹೈಟೆಕ್ ತರಗತಿ ಉದ್ಘಾಟನೆ
ಎಡನೀರು : ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹೈಟೆಕ್ ತರಗತಿಯನ್ನು ಜೂನ್ 7ನೇ ತಾರೀಕಿನಂದು ಶಾಲಾ ಮುಖ್ಯೋಪಾಧ್ಯಾಯಿನಿ ಶಾರದಾ ಎಡೆಕೋಡ್ಲು ರವರು ಉದ್ಘಾಟನೆ ಮಾಡಿದರು.ಸಭೆಯಲ್ಲಿ ನಮ್ಮ ಶಾಲಾ ಎಮ್ .ಪಿ.ಟಿ.ಎ ಅಧ್ಯಕ್ಷೆ ರಾಜೇಶ್ವರಿ ,ಪಿ.ಟಿ.ಎ ಸದಸ್ಯರೂ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ದವರು ಸಭೆಯಲ್ಲಿ ಉಪಸ್ಥಿತರಿದ್ದರು . ಶಾಲೆಯಲ್ಲಿ 4 ತರಗತಿ ಕೋಣೆಯನ್ನು ಹೈಟೆಕ್ ಕೊಣೆ ಯಾಗಿ ಪರಿವರ್ತಿಸಲಾಯಿತು. ಪ್ರೊಜೆಕ್ಟರ್ , ಲ್ಯಾಪ್ ಟಾಪ್ ಹಾಗೂ ಧ್ವನಿವರ್ಧಕಗಳನ್ನೊಳಗೊ೦ಡ ಹೈಟೆಕ್ ಕೊಣೆ ಮಕ್ಕಳಲ್ಲಿ ಕಲಿಕೆ ಧೀರ್ಘ ಕಾಲ ಉಳಿಯುವಲ್ಲಿ ಸಹಕಾರಿ, ಹಾಗೆಯೇ "ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಮಕ್ಕಳಲ್ಲಿ ಪರಿಣಾಮ" ಬಿರುವುದು ಎಂದು ಹೇಳಿ ಸರ್ಕಾರಕ್ಕೆ ಈ ಯೋಜನೆಯನ್ನು ತ್ವರಿತವಾಗಿ ಕಾರ್ಯಗತ ಗೊಳಿಸಿದ್ದಕ್ಕೆ ಧನ್ಯವಾದವನ್ನು ಶಾರದಾ ಎಡಕೊಡ್ಲು ರವರು ಹೇಳಿದರು. ಶಾಲಾ ಶಿಕ್ಷಕಿಯಾದ ಭಾರತಿ ರವರು ಸ್ವಾಗತಿಸಿ, ಜ್ಯೋತಿ ಲಕ್ಷ್ಮಿ ಯವರು ಧನ್ಯವಾದ ಕಾರ್ಯಕ್ರಮ ನಿರ್ವಹಿಸಿದರು .
Thursday, June 21, 2018
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ
ಎಡನೀರು : ಜೂನ್ 20 ರಂದು ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆ ಎಡನೀರಿನಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಯಲ್ಲಿ ಎಲ್ಲಾ ವಿಷಯಗಳಲ್ಲೂ ಎ+ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಾದ ಮಂಜುಶ್ರೀ ಶಿವಾನಿ ಬಿ.ಎಸ್ , ವೀಣಾಸುಮತಿ ಎ.ಎಸ್ ,ಅಂಬಿಕಾ ಸಿ .ಎಚ್ ,ಹಾಗೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಶುಭಶ್ರೀ ಲಕ್ಷ್ಮಿ ಸಿ. ಎಚ್ , ನಮಿತಾ ವೈ ಎನ್ ಇವರನ್ನು ಶಾಲಾ ಅಧ್ಯಾಪಕ ಹಾಗೂ ಸಿಬ್ಬಂದಿ ಹಾಗೂ ಪಿ.ಟಿ .ಎ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಯು.ಎಸ್.ಎಸ್ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದ ಪೂಜಾ .ಕೆ ಇವಳನ್ನೂ ಅಭಿನಂದಿಸಲಾಯಿತು. ಶಾಲಾ ಪ್ರಾಂಶುಪಾಲರಾದ ನಾರಾಯಣನ್. ಎ ಎನ್ , ಮುಖ್ಯೋಪಾಧ್ಯಾಯಿನಿ ಶಾರದಾ ಎಡಕೊಡ್ಲು , ಎಂ.ಪಿ ಟಿ ಎ ಅಧ್ಯಕ್ಷೆ ರಾಜೇಶ್ವರಿ , ಎಲ್ಲಾ ರಕ್ಷಕ- ಶಿಕ್ಷಕ ವೃ೦ದ, ಸಿಬ್ಬಂದಿಗಳು ಶಾಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಇದೇ ದಿನ 2018 -19 ನೇ ಸಾಲಿನ ರಕ್ಷಕ- ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
Tuesday, June 5, 2018
ವಿಶ್ವ ಪರಿಸರ ದಿನ ಆಚರಣೆ
ಎಡನೀರು : ಜೂನ್ 5 ರಂದು ನಮ್ಮ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಪರಿಸರ ಸಂರಕ್ಷಣಾ ಮನೋಭಾವ ಕೇವಲ ಒಂದು ದಿನಕ್ಕೆ ಮೀಸಲಿಡಬಾರದು ಹಾಗೂ ನಿತ್ಯಜೀವನದಲ್ಲಿ ಪರಿಸರ ಪ್ರೇಮ ಅಗತ್ಯ ವೆಂದು ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಅಡೆಕೋಡ್ಲು ರವರು ಮಕ್ಕಳಿಗೆ ಹೇಳಿದರು. ಕಾರ್ಯಕ್ರಮದಲ್ಲಿ ಅತಿಥಿ ಯಾಗಿ ಬಂದಂತಹ ಚೆಂಗಳ ಪಂಚಾಯತು ಉಪಾಧ್ಯಕ್ಷರಾದ ಶ್ರೀಮತಿ ಶಾಂತ ಕುಮಾರಿ ಯವರು ಮಕ್ಕಳಿಗೆ ಸಸಿಯನ್ನು ವಿತರಿಸಿ ವಾತಾವರಣದ ಸಂರಕ್ಷಣೆಯಲ್ಲಿ ಅರಣ್ಯ ಸಂಪತ್ತಿನ ಪಾತ್ರದ ಕುರಿತು ಮಕ್ಕಳಿಗೆ ತಿಳಿಸಿದರು ನಂತರ 9ನೇ ತರಗತಿಯ ಕು. ವೈದೇಹಿ 'ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಯಾಗಿ ನನ್ನ ಪಾತ್ರ' ಎಂಬ ಕುರಿತಂತೆ ವಿಚಾರ ಸಂಕಿರಣ ವನ್ನು ಮಂಡಿಸಿದಳು. ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಯಿತು
Friday, June 1, 2018
ಶಾಲಾಪ್ರವೇಶೋತ್ಸವ 2018-19
ಎಡನೀರು : ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆ ಎಡನೀರಿನಲ್ಲಿ ಜೂನ್ ಒಂದನೇ ತಾರೀಕಿನಂದು ಶಾಲಾಪ್ರವೇಶೋತ್ಸವವು ಜರಗಿತು.ಮಕ್ಕಳನ್ನುಮೆರೆವಣಿಗೆಯೊಂದಿಗೆ ಪ್ರವೇಶೋತ್ಸವದ ಗೀತೆಯನ್ನು ಕೇಳಿಸುವ ಮುಖಾಂತರ ಶಾಲೆಗೆ ಸ್ವಾಗತಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶಾರದ ಎಡೆಕೋಡ್ಲುರವರು ಮಕ್ಕಳಿಗೆ ಶುಭ ಹಾರೈಸಿದರು. ನಮ್ಮ ಶಾಲಾಪ್ರವೇಶೋತ್ಸವದ ಉದ್ಘಾಟನೆಯನ್ನು ಪಂಚಾಯತು ಉಪಾಧ್ಯಕ್ಷೆ ಶ್ರೀಮತಿ ಶಾಂತಕುಮಾರಿಯವರು ನೂತನ ವಿದ್ಯಾರ್ಥಿಗಳಿಗೆ ಪುಸ್ತಕ,ಪೆನ್ನನ್ನೂ ನೀಡಿ ಶುಭ ಹಾರೈಸಿದರು . ಶಾಲಾ ಸಹ ಶಿಕ್ಷಕ ವೆಂಕಟಕೃಷ್ಣ ಕೆ ಯವರು ಶಿಕ್ಷಣಮಂತ್ರಿಯವರ ಸಂದೇಶವನ್ನು ವಾಚಿಸಿದರು ನಂತರ ಮಕ್ಕಳಿಗೆ ಸಿಹಿಯನ್ನು ಹಂಚಲಾಯಿತು. ಶಾಲಾ ಅಧ್ಯಾಪಕರೂ, ಸಿಬ್ಬಂದಿ ವರ್ಗದವರೂ ಉಪಸ್ಥಿತರಿದ್ದರು.
Subscribe to:
Posts (Atom)