ಹೈಸ್ಕೂಲ್ ಹಾಗೂ ಯುಪಿ ವಿಭಾಗದ ಮಧುರ ಕನ್ನಡ ಪೂರ್ವಭಾವಿ ಪರೀಕ್ಷೆ 12 ನೇ ತಾರೀಕು ಶಾಲೆಯಲ್ಲಿ ನಡೆಸಲಾಯಿತು.ಪ್ರತ್ಯೇಕವಾಗಿ ಇಪ್ಪತ್ತು ಇಪ್ಪತ್ತರ ಹಾಗೆ ಎರಡು ಗುಂಪುಗಳನ್ನು ಮಾಡಲಾಯಿತು ಒಟ್ಟು 40 ಮಕ್ಕಳನ್ನು ಆಯ್ಕೆ ಮಾಡಲಾಯಿತು.
Tuesday, October 30, 2018
Tuesday, October 23, 2018
ಶಾಲಾ ಕಲೋತ್ಸವ
ಎಡನೀರು : ನಮ್ಮ ಶಾಲೆಯ ಶಾಲಾ ಕಲೋತ್ಸವ ಇದೇ ತಿಂಗಳ 16 ಹಾಗೂ 20 ನೇ ತಾರೀಕು ನಡೆಯಿತು.ಮುಖ್ಯೋಪಾಧ್ಯಾಯಿನಿ ಶಾರದಾ ಎಡೆಕೋಡ್ಲು ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, " ಸಹಪಠ್ಯ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ವೇದಿಕೆ ಎಂದು ಹೇಳಿದರು. ಸ್ಪರ್ಧಾ ಮನೋಭಾವನೆ ಬೆಳೆಸಲು ಈ ರೀತಿಯ ಕಾರ್ಯಕ್ರಮ ಮಕ್ಕಳಿಗೆ ಒಳ್ಳೆಯ ವೇದಿಕೆ " ಎಂದು ಹೇಳಿದರು.
ಎರಡು ದಿನ ನಡೆದ ಕಲೋತ್ಸವದಲ್ಲಿ ತಿರುವಾದಿರ,ನಾಡ-ನೃತ್ಯ೦,ಭರತನಾಟ್ಯ,ಯಕ್ಷಗಾನ ,ಮೂಕಾಭಿನಯ ,ಮಿಮಿಕ್ರಿ, ಮಾಪಿಳ್ಳೆ ಪಾಟ್ , ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಿತು. ಸಂಸ್ಕೃತೋತ್ಸವ ಜೊತೆಗೆ ನಡೆಯಿತು ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಎಲ್ಲಾ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.
Tuesday, October 2, 2018
ಅಕ್ಟೋಬರ್ 2 ಗಾಂಧಿ ಜಯಂತಿ
ಎಡನೀರು: ಅಕ್ಟೋಬರ್ 2 ಗಾಂಧಿ ಜಯಂತಿಯನ್ನು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಗ್ಗೆ 9:30ಕ್ಕೆ ಸರಿಯಾಗಿ ಸಭೆ ಸೇರಲಾಯಿತು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯೋಪಾಧ್ಯಾಯಿನಿ ಶಾರದ ಅಡೆಕೋಡ್ಲುರವರು ಶಾಲಾ ಪರಿಸರ ಸ್ವಚ್ಛವಾಗಿಟ್ಟುಕೊಳ್ಳವುದು ನಮ್ಮೆಲ್ಲರ ಕರ್ತವ್ಯ ಹಾಗೂ ಗಾಂಧಿ ತತ್ವ ನಮಗೆಲ್ಲಾ ಅನುಕರಣೀಯ ಎಂದು ಹೇಳಿದರು. ನಂತರ ಶಾಲಾ ಶಿಕ್ಷಕರ ಹಾಗೂ ಸಿಬ್ಬಂದಿ ವರ್ಗದ ಮಾರ್ಗದರ್ಶನದಲ್ಲಿ ಮಕ್ಕಳು ಶಾಲಾ ಪರಿಸರವನ್ನು ಸ್ವಚ್ಛ ಗೊಳಿಸಿದರು. ಕೊನೆಯಲ್ಲಿ ಲಘು ಉಪಹಾರ ಹಾಗೂ ಪಾನೀಯ ವ್ಯವಸ್ಥೆಯನ್ನು ಮಾಡಲಾಗಿತ್ತು.
Subscribe to:
Posts (Atom)