ಎಡನೀರು: ಅಗೋಸ್ತು 15 ರಂದು ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಬ್ರಮದಲ್ಲಿ ಆಚರಣೆ ಮಾಡಲಾಯಿತು.ಬೆಳಗ್ಗೆ ವರುಣನ ಅಡಚಣೆ ಇದ್ದರೂ, 9:40 ಕ್ಕೆ ಸರಿಯಾಗಿ ಧ್ವಜಾರೋಹಣವನ್ನು ನಮ್ಮ ಗೌರವಾನ್ವಿತ ಪ್ರಾಂಶುಪಾಲರಾದ ಶ್ರೀ ನಾರಾಯಣ್ ರವರು ನಡೆಸಿ ಮಕ್ಕಳಿಗೆ ಹಿತವಚನವನ್ನು ಹೇಳಿದರು. ಗೌರವಾನ್ವಿತ ಮುಖ್ಯೋಪಾಧ್ಯಾಯಿನಿ ಶಾರದಾ ಅಡೆಕೋಡ್ಲುರವರು ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವಲ್ಲಿ ಯಶಸ್ವಿಯಾದರು.
ನಂತರ ನಡೆದ ಭಾಷಣ, ಪ್ರಬಂಧ,ಸ್ವಾತಂತ್ರ್ಯ ದಿನಾಚರಣಾ ರಸಪ್ರಶ್ನೆ ,ದೇಶಭಕ್ತಿ ಹಾಡಿನ ಸ್ಪರ್ಧೆಗಳಲ್ಲಿ ಮಕ್ಕಳು ಆಸಕ್ತಿ ಯಿಂದ ಭಾಗವಹಿಸಿದರು.ಕಾರ್ಯಕ್ರಮದ ಕೊನೆಗೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಎಲ್ಲರಿಗೂ ಸಿಹಿತಿಂಡಿ ವಿತರಿಸಿ,12:30 ಕ್ಕೆ ಕಾರ್ಯಕ್ರಮಕ್ಕೆ ವಿರಾಮ ನೀಡಲಾಯಿತು.
Monday, August 27, 2018
ಸ್ವಾತಂತ್ರ್ಯ ದಿನ ಆಚರಣೆ
ಚಾಂದ್ರ ದಿನ ಆಚರಣೆ
ಜುಲೈ 23 ನೇ ಸೋಮವಾರ ನಮ್ಮ ಶಾಲೆಯಲ್ಲಿ ಚಾಂದ್ರ ದಿನ ಆಚರಿಸಲಾಯಿತು. ಜುಲೈ 21 ರ ದಿನದ ಮಹತ್ವದ ಕುರಿತು ಮುಖ್ಯೋಪಾಧ್ಯಾಯಿನಿ ತಿಳಿಸಿದರು. ಚಾಂದ್ರ ಯಾನದ ವೀಡಿಯೋ ಪ್ರದರ್ಶಿಸಲಾಯಿತು. ಹೈಸ್ಕೂಲು ಮಟ್ಟದಲ್ಲಿ ಚಾಂದ್ರದಿನ ಸೆಮಿನಾರ್ ಹಾಗೂ ಎಲ್ಲಾ ವಿಭಾಗದಲ್ಲಿ ಚಾಂದ್ರದಿನದ ರಸಪ್ರಶ್ನೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆ ಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
Subscribe to:
Posts (Atom)