ಎಡನೀರು: ಮಗುವಿನ ಸರ್ವತೋಮುಖ ವಿಕಾಸದ ಮಂದಿರ ಎಂದರೆ ಶಾಲೆ, ಶಾಲೆಯಲ್ಲಿ ಮಗುವಿನ ಕಲಿಕೆ ಯಶಸ್ವಿಯಾಗಿ ಸಾಗಲು ಮನೆಯ ಪರಿಸರ ಹಾಗೂ ಪೋಷಕರ ಸ್ಥಿತಿ ಅವರ ಪ್ರೋತ್ಸಾಹ ಕೂಡ ಅಗತ್ಯ. ತಮ್ಮ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತ ಚರ್ಚೆ ನಡೆಸುವ ಸಲುವಾಗಿ ಕ್ಲಾಸ್ ಪಿ. ಟಿ.ಎ ಸಭೆಯನ್ನು ಕರೆಯಲಾಗಿತ್ತು. ಈ ಸಲದ ಕಾಲು ವಾರ್ಷಿಕ ಪರೀಕ್ಷೆಯ ಪಲಿತಾಂಶದ ಆಧಾರದಲ್ಲಿ ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಪೋಷಕರಲ್ಲಿ ಸಮಾಲೋಚನೆ ನಡೆಸಿದರು. 10ನೇ ತರಗತಿಯ ಪಿ. ಟಿ.ಎ ಸಭೆ 26ನೇ ತಾರೀಕು ಮಂಗಳವಾರ ಹಾಗೂ 9ನೇ ತರಗತಿ ಪಿ. ಟಿ.ಎ ಸಭೆ 27ನೇ ತಾರೀಕು,ಹಾಗೇ 8 ಹಾಗೂ 7-5 ತರಗತಿಯ ಪಿ. ಟಿ.ಎ ಸಭೆ 28ನೇ ಗುರುವಾರ ಸಂಜೆ 3:30 ರ ನಂತರ ನಡೆಯುತು. ಈ ಸಭೆಯಲ್ಲಿ ರೋಬೆಲ್ಲಾ ರೋಗಕ್ಕೆ ಹಾಕುವ ಲಸಿಕೆಯ ಕುರಿತಂತೆ ಪೋಷಕರಿಗೆ ಅರಿವು ಮೂಡಿಸುವ ಸಲುವಾಗಿ ಸರ್ಕಾರಿ ವೈದ್ಯರು ಭಾಗವಹಿದ್ದರು.
Friday, September 29, 2017
ಕ್ಲಾಸ್ ಪಿ.ಟಿ.ಎ ಸಭೆ- ವಿದ್ಯಾರ್ಥಿಗಳ ಸಾಧನೆಯನ್ನು ಪರಿಶೀಲಿಸಿದ ಪೋಷಕರು
ದಸರಾ ಹಬ್ಬದ ಪ್ರಯುಕ್ತ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ನಡೆದ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದವರು
ಕಾಸರಗೋಡು: ದಸರಾ ಹಬ್ಬದ ಪ್ರಯುಕ್ತ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಹೈಸ್ಕೂಲ್ ಶಾಲಾ ಮಟ್ಟದಲ್ಲಿ ನಡೆದ ವಿವಿಧ ಸ್ಪರ್ದೆಗಳಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾಷಣ ಸ್ಪರ್ದೆಯಲ್ಲಿ 10ನೇ ಕ್ಲಾಸ್ ನ ವೀಣಾಸುಮತಿ, ಕವಿತಾರಚನೆಯಲ್ಲಿ 10ನೇ ತರಗತಿಯ ಅಂಬಿಕ , ಹಾಗೂ ಭಾವಗೀತೆ ಸ್ಪರ್ದೆಯಲ್ಲಿ 8ನೇ ತರಗತಿಯ ವೈಧೇಹಿ ಪ್ರೋತ್ಸಾಹಕ ಬಹುಮಾನ ಗಳಿಸಿದರು. ಈ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕ-ರಕ್ಷಕ ಸಭೆಯಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀ ಮತಿ ಶಾರದಾ ಎಡೆಕೋಡ್ಲುರವರು ಅಭಿನಂದಿಸಿದರು.
Thursday, September 28, 2017
ಮಕ್ಕಳಿಗೆ ಕೋಳಿ ವಿತರಣೆ
ಎಡನೀರು: ನಮ್ಮ ಶಾಲೆಯ 50 ಮಕ್ಕಳಿಗೆ ತಲಾ 5 ಕೋಳಿ ಮರಿಗಳನ್ನು ವಿತರಣೆ ಮಾಡಲಾಯಿತು. ನಮ್ಮ ಪಂಚಾಯತ್ ಅಧ್ಯಕ್ಷೆ ಸಾಹಿನ ಸಲೀಮ್ ಮಕ್ಕಳಿಗೆ ಕೋಳಿಮರಿಗಳನ್ನು ವಿತರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.ಹಾಗೂ ಈ ಕಾರ್ಯಕ್ರಮದ ಯೋಜನೆಯ ಸಮಗ್ರ ಪರಿಚಯ ಮಾಡಿಕೊಟ್ಟರು. ಮುಖ್ಯೋಪಾಧ್ಯಾಯಿನಿ ಶಾರದ ಎಡಕೋಡ್ಲು ರವರು ಮಕ್ಕಳಿಗೆ ಈ ರೀತಿಯ ಸ್ವ ಉದ್ಯೋಗಕ್ಕೆ ಪ್ರೋತ್ಸಾಹಿಸುವ ಯೋಜನೆಯ ಬಗ್ಗೆ ಮಾತನಾಡಿ ವೈಯುಕ್ತಿಕವಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಈ ರೀತಿಯ ಕಾರ್ಯಕ್ರಮ ಹೇಗೆ ಸಹಕಾರಿ ಎಂದು ಹೇಳಿದರು. ಪಂಚಾಯತ್ ಉಪಾಧ್ಯಕ್ಷೆ ಶಾಂತಕುಮಾರಿ ಟೀಚರ್ ಸಭೆಯಲ್ಲಿ ಉಪಸ್ಥಿತರಿದ್ದರು.