ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆ ಎಡನೀರು
ಹಸಿರು ಕೇರಳ ಆಚರಣೆ
ಹಸಿರು ಕೇರಳ ಆಚರಣೆಯು ಡಿಸಂಬರ್ 8 ನೇ ಗುರುವಾರ ನಮ್ಮಶಾಲೆಯಲ್ಲಿ ಆಚರಿಸಲಾಯುತು. ಬೆಳಗ್ಗೆ 9:30 ಕ್ಕೆ ಶಾಲಾ ಎಸೆ೦ಬ್ಲೀ ಕರೆದು ಮಕ್ಕಳಿಗೆ ಹರಿದ ಕೇರಳ ಪ್ರತಿಜ್ಞೆ ಯನ್ನು ಹಿರಿಯ ಶಿಕ್ಷಕಿಶ್ರೀಮತಿ ಶಾಂತ ಕುಮಾರಿ ಟೀಚರ್ ಬೋಧಿಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ ಎಡೆಕೋಡ್ಲು ಅವರು ಮಕ್ಕಳಿಗೆ ಪರಿಸರದ ಮಹತ್ವ,ನೀರಿನ ಸಂರಕ್ಷಣೆ ಹಾಗು ಗಿಡಮರಗಳನ್ನು ನೆಟ್ಟು ಬೆಳೆಸಬೇಕೆಂದು ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸಿದರು.
ನಂತರ ಹಸಿರು ಕೇರಳ ಜಾಗೃತಿ ಜಾಥಾ ನಡೆಸಲಾಯಿತು ಮಕ್ಕಳೆಲ್ಲರೂ ಹಸಿರು ಕೇರಳದ ಬಗ್ಗೆ ಘೋಷಣೆಯನ್ನು ಕೂಗುತ್ತಾ ಜಾಥಾದಲ್ಲಿ ಭಾಗವಹಿಸಿದರು. ನಂತರ ಹಸಿರು ಕೇರಳ ಆಚರಣೆಯ ಅಂಗವಾಗಿ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅತಿಥಿ ಯಾಗಿ ಮಾಜಿ ಜಿಲ್ಲಾ ವಿಧ್ಯಾಧಿಕಾರಿ ಯಾದ ವೇಣುಗೋಪಾಲನ್. ಇ. ರವರು ಭಾಗವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ "ಪ್ರಕೃತಿ ಮಾನವನ ಮಿತ್ರ" ಎಂಬ ವಿಷಯದಲ್ಲಿ ಮಕ್ಕಳು ಭಾಷಣ ವನ್ನು ಮಾಡಿದರು ಹಾಗೂ ಪ್ರಕೃತಿಯ ಬಗ್ಗೆ ಜಾಗ್ರತಿ ಮೂಡಿಸುವ ಚಿತ್ರರಚನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಹಸಿರಿನ ಮಹತ್ವವನ್ನು ಸಾರುವ ಪರಿಸರ ಹಾಡುಗಳನ್ನು ಸಾಮೂಹಿಕವಾಗಿ ಹಾಡಿದರು. ಕೊನೆಯಲ್ಲಿ ವಿಜೇತರಿಗೆ ಬಹುಮಾನವನ್ನುಕೊಡಲಾಯಿತು ಕೊನೆಗೆ ಶಾಲಾ ಹಿರಿಯ ಅಧ್ಯಾಪಕರಾದ ಮಧುಸೂದನನ್ ಪಿ.ಎನ್ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು. ಸಂಜೆ 3:30ಕ್ಕೆ ಸರಿಯಾಗಿ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದ೦ತೆ ನಮ್ಮ ಶಾಲಾಪರಿಸರ ವನ್ನು ಶುಚಿ ಗೊಳಿಸಿದರು .