ನಮ್ಮ ಶಾಲೆಯ 2015-2016ನೇ ಪಾರ್ಲಿಮೆಂಟ್ ರೂಪೀಕರಣವು ಜರಗಿತು . ಪ್ರತಿಯೊoದು ತರಗತಿ ಯ ನಾಯಕ/ನಾಯಕಿ ಯನ್ನು ಚುನಾವಣೆಯ ಮೂಲಕ ಆರಿಸಲಾಯಿತು. ಆ ಬಳಿಕ ಶಾಲಾ ಮಕ್ಕಳ ನಾಯಕ /ನಾಯಕಿ ಯನ್ನು ಆಯ್ಕೆ ಮಾಡಲಾಯಿತು . ಶಾಲಾ ನಾಯಕ ವೈಶಾಖ್.ಸಿ .ಯಚ್ ಹಾಗೂ ಉಪನಾಯಕಿ ಕು. ಶೆರಲ್ ಮೆರಿಯ ಮಾಡ್ತ ಆಯ್ಕೆ ಗೊಂಡರು. ಸಮಾಜ ವಿಜ್ಞಾನ ಅಧ್ಯಾಪಕರಾದ ರಾಮಮೋಹನ್ ರವರು ನೇತೃತ್ವ ವಹಿಸಿದರು. ಎಲ್ಲಾ ಆಧ್ಯಾಪಕ ಅಧ್ಯಾ ಪಿಕೆಯರು ಉಪಸ್ಥಿತರಿದ್ದರು.
Tuesday, August 18, 2015
Tuesday, July 14, 2015
ಶಾಲಾ ಕ್ಲಬ್ ಗಳ ಉದ್ಘಾಟನೆ
ನಮ್ಮ ಶಾಲೆಯ ವಿದ್ಯಾರಂಗ ಹಾಗೂ ಇತರ ಎಲ್ಲ ಕ್ಲಬ್ ಗಳ ಉದ್ಘಾಟನೆ 10/07/2015 ರಂದು ನಡೆಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶಾರದಾ ಅಡೆಕೋಡ್ಲು ರವರು ಹಣತೆ ಬೆಳಗಿಸಿ ಉದ್ಘಾಟಿಸಿದರು 2015ನ್ನು ಅಂತರಾಷ್ಟ್ರೀಯ ಮಣ್ಣಿನ ವರ್ಷ ಹಾಗು ಬೆಳಕಿನ ವರ್ಷವಾಗಿ ಆಚರಿಸುವುದರ ಮಹತ್ವವನ್ನು ಅರಿಯಲು ವಿಶೇಷವಾಗಿ ಹಣತೆ ಬೆಳಗಿಸಿ ಉದ್ಘಾಟಿಸಿದರು .
ಮಕ್ಕಳು ತಯಾರಿಸಿದ ವಿಜ್ಞಾನ ಸಂಚಿಕೆಗಳನ್ನು ಮುಖ್ಯೋಪಾಧ್ಯಾಯಿನಿ ಶಾರದಾ ಅಡೆಕೋಡ್ಲುರವರು, ಸಂಸ್ಕೃತ ಅಧ್ಯಾಪಕ ಮಧುಸೂದನ,ವಿಜ್ಞಾನ ಅಧ್ಯಾಪಿಕೆ ಜ್ಯೋತಿಲಕ್ಷ್ಮಿ ,ಹಿಂದಿ ಅಧ್ಯಾಪಿಕೆ ಶೀಮತಿ ಶೈಲಜಾ ರವರು ಬಿಡುಗಡೆ ಗೊಳಿಸಿದರು.ಮಕ್ಕಳಿಂದ ಸೆಮಿನಾರ್ ಮಂಡನೆ, ಪ್ರಯೋಗಗಳು ಮಣ್ಣಿನ ಸಂರಕ್ಷಣೆ ಬಗ್ಗೆ ಮಾಹಿತಿಯನ್ನೊಳಗೊಂಡ ಲೇಖನಗಳು,ಹಾಡು,ಕಿರುನಾಟಕ ಇತ್ಯಾದಿ ಜರಗಿತು. ಎಲ್ಲ ಶಿಕ್ಷಕ ಶಿಕ್ಷಕಿಯರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡರು. ವಿದ್ಯಾರ್ಥಿನಿ ಕು. ಹರ್ಷಿತಾ ಸ್ವಾಗತಿಸಿ ಕು.ಸುಶ್ಮಿತಾ ಧನ್ಯವಾದ ಹೇಳಿದಳು. ಕು. ಶೆರಲ್ ಮರಿಯ ಮಾಡ್ತ ಕಾರ್ಯಕ್ರಮವನ್ನು ನಿರೂಪಿಸಿದಳು
ಬಯೋಗ್ಯಾಸ್ ಪ್ಲಾಂಟ್ ಉದ್ಘಾಟನೆ
ಕೇರಳ ರಾಜ್ಯ ಕೃಷಿ ಇಲಾಖೆ ಹಾಗೂ ಚೆಂಗಳ ಪಂಚಾಯತಿನ ಸಹಯೋಗದೊಂದಿಗೆ ನಮ್ಮ ಶಾಲೆಗೆ ಅಳವಡಿಸಿದ ಬಯೋಗ್ಯಾಸ್ ಪ್ಲಾಂಟ್ ನ ಉದ್ಘಾಟನೆಯನ್ನು ಚೆಂಗಳ ಗ್ರಾಮ ಪಂಚಾಯತ್ ವಿದ್ಯಾಭ್ಯಾಸ ಸ್ಥಾಯಿಸಮಿತಿಯ ಅಧ್ಯಕ್ಷರೂ,ಚೆಂಗಳ ಗ್ರಾಮ ಪಂಚಾಯತ್ ನ ಸದಸ್ಯರೂ ಆದ ಅಶ್ರಫ್ ರವರು ಉದ್ಘಾಟಿಸಿದರು. ಮುಖ್ಯ ಅತಿಥಿ ಯಾಗಿ ಚೆಂಗಳ ಕೃಷಿ ಭವನ ದ ಅಧಿಕಾರಿ ಶ್ರೀಮತಿ ಹೆನ್ನಾ ರವರು ಬಯೋಗ್ಯಾಸ್ ಪ್ಲಾಂಟ್ ನ ಬಗ್ಗೆ ಮಾಹಿತಿ ನೀಡಿದರು.
ಶಾಲಾ ಮುಖ್ಯೋಪಾಧ್ಯಾ ಯಿನಿ ಶೀಮತಿ ಶಾರದಾ ಎಡೆಕೋಡ್ಲು ರವರು ಅಧ್ಯಕ್ಷತೆ ವಹಿಸಿದರು. ಶಾಲಾ ಅಧ್ಯಾಪಕ , ಸಿಬ್ಬಂಧಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. NSS ನ ಪ್ರಧಾನ ಕಾರ್ಯದರ್ಶಿ ಹಾಗೂ ಹೈಯರ್ ಸೆಕೆಂಡರಿ ಅಧ್ಯಾಪಕರಾದ ವಾಸುದೇವ ಉಪಸ್ಥಿತರಿದ್ದರು. ಅಧ್ಯಾಪಕರಾದ ಮಧುಸೂದನ ರವರು ಸ್ವಾಗತಿಸಿ ಹಿರಿಯ ಅಧ್ಯಾ ಪಿಕೆ ಶಾಂತ ಕುಮಾರಿ ಯವರು ವಂದಿಸಿದರು .
Thursday, July 2, 2015
ವಿಶ್ವ ಮಾದಕ ವಸ್ತು ನಿಷೇಧ ದಿನಾಚರಣೆಯಲ್ಲಿ ನಮ್ಮ ಮಕ್ಕಳು
ಇದರ ಅoಗವಾಗಿ ವಿದ್ಯಾರ್ಥಿಗಳ ಮೆರವಣಿಗೆ ನಡೆಯಿತು . ಬಳಿಕ ನಡೆದ ಜನ ಜಾಗೃತಿ ಸಭೆ ಯನ್ನು ಜನ ಜಾಗೃತಿ ಸಭೆಯ ಉಪಾದ್ಯಕ್ಷ ಬಾಲಕೃಷ್ಣ ವೊರ್ಕೊಡ್ಲುರವರು ಉದ್ಘಾಟಿಸಿದರು ,ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಎಡಕೊಡ್ಲು ,ಧರ್ಮಸ್ಥ ಳ ಕ್ಷೇತ್ರ ಗ್ರಾಮಾಭಿವೃದ್ಹಿ ಯೋಜನೆಯ ಮೇಲ್ವಿಚಾರಕಿ ಸವಿತಾ . ಎ. ಶೆಟ್ಟಿ , ಸೇವಾ ಪ್ರತಿನಿಧಿಗಳು ,ಸ್ವಸಹಾಯ ಸಂಘದ ಸದಸ್ಯೆಯರು ಉಪಸ್ಥಿತರಿದ್ದರು . ಹಿರಿಯ ಅಧ್ಯಾಪಿಕೆ ಶಾಂತಕುಮಾರಿಯವರು ಮಕ್ಕಳಿಗೆ ಪ್ರತಿಜ್ಞೆ ಬೋಧಿಸಿದರು.
ಮಕ್ಕಳು ಮಾದಕ ವ್ಯಸನದ ವಿರೋಧಿ ದಿನದ ಬಗ್ಗೆ ಭಾಷಣ ಮತ್ತು ಮಾದಕ ವ್ಯಸನದ ಪರಿಣಾಮದ ಬಗ್ಗೆ ಕಿರು ನಾಟಕವನ್ನು ಪ್ರದರ್ಶಿಸಿದರು. ಅಧ್ಯಾಪಕರು , ವಿಧ್ಯಾರ್ಥಿಗಳು ಭಾಗವಹಿಸಿದರು .
ಮಕ್ಕಳು ಮಾದಕ ವ್ಯಸನದ ವಿರೋಧಿ ದಿನದ ಬಗ್ಗೆ ಭಾಷಣ ಮತ್ತು ಮಾದಕ ವ್ಯಸನದ ಪರಿಣಾಮದ ಬಗ್ಗೆ ಕಿರು ನಾಟಕವನ್ನು ಪ್ರದರ್ಶಿಸಿದರು. ಅಧ್ಯಾಪಕರು , ವಿಧ್ಯಾರ್ಥಿಗಳು ಭಾಗವಹಿಸಿದರು .
Friday, June 26, 2015
ರಕ್ಷಕ -ಶಿಕ್ಷಕ ಸಂಘ (P.T.A) ದ ಸಭೆ
16-06-2015 ನೇ ಮ೦ಗಳವಾರದoದು ನಮ್ಮ ಶಾಲಾ ರಕ್ಷಕ -ಶಿಕ್ಷಕ ಸಂಘ (P.T.A) ದ ಈ ಸಾಲಿನ ಮೊದಲ ಸಭೆ ಜರಗಿತು. ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲೂ A+ ಪಡೆದ ಕು.ಹರ್ಷ ಹಾಗೂ ಒoಭತ್ತು ವಿಷಯಗಳಲ್ಲಿ A+ ಪಡೆದ ವಿಶಾಖ್ ಇವರನ್ನು ಶಾಲಾವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.. ಈ ವರ್ಷದ ಶಾಲಾ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರಾಗಿ ಮಹಾಲಿಂಗ ಪಾಠಾಳಿ ಹಾಗೂ ಮಾತೃ ಸಂಘದ ಅಧ್ಯಕ್ಷರಾಗಿ ಶ್ರೀಮತಿ ಸರೋಜ ಎಸ್ . ಭಟ್ ರನ್ನು ಆಯ್ಕೆ ಮಾಡಲಾಯಿತು. ಹನ್ನೆರಡು ಸದಸ್ಯರನ್ನು ಒಳಗೊಂಡ ಒಂದು ಸಮಿತಿಯನ್ನು ರೋಪೀಕರಿಸಲಾಯಿತು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಎಡಕೊಡ್ಲುರವರು ಕಾರ್ಯಕ್ರಮಕ್ಕೆ ಸ್ವಾಗತಕೋರಿದರು ಹಾಗೂ ಅಧ್ಯಾಪಕರಾದ ವೆಂಕಟಕೃಷ್ಣ ರವರು ಧನ್ಯವಾದವನ್ನು ಅರ್ಪಿಸಿದರು..
.
Sunday, June 14, 2015
ವಿಶ್ವ ಪರಿಸರ ದಿನಾಚರಣೆ ಜೂನ್ 5
ವಿಶ್ವ ಪರಿಸರ ದಿನಾಚರಣೆಯನ್ನು ಜೂನ್ 5ರಂದು ನಮ್ಮ ಶಾಲೆಯಲ್ಲಿ ಆಚರಿಸಲಾಯಿತು ...ಹಿರಿಯ
ಶಿಕ್ಷಕರಾದ ಮಧುಸೂದನ ರವರು ಮಕ್ಕಳಿಗೆ ವಿಶ್ವ ಪರಿಸರದ ಪ್ರತಿಜ್ಞೆ ಯನ್ನು
ಬೋಧಿಸಿದರು. ಶಾಲಾ ನಾಯಕಿ ಕು.ಶೆರಲ್ ಮರಿಯ ಮಾಡ್ತಾ 'ಪರಿಸರದ ಸಂರಕ್ಷಣೆ ಯಲ್ಲಿ
ಮಕ್ಕಳ ಪಾತ್ರ ' ದ ಬಗ್ಗೆ ಲೇಖನ ಮಂಡಿಸಿದಳು . ಮಕ್ಕಳಿಗೆ ಗಿಡ ವನ್ನು ವಿತರಿಸಿದರು
.. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಎಡಕೊಡ್ಲು ರವರು ನಮ್ಮ ಅಸ್ತಿತ್ವ ದಲ್ಲಿ
ಪರಿಸರ ಹೇಗೆ ಪ್ರಭಾವ ಬೀರಿದೆ ಎಂದೂ ಮಕ್ಕಳು ಹೇಗೆ ಪರಿಸರವನ್ನು ಶುಚಿ
ಯಾಗಿರಿಸಬೇಕೆ೦ದು ತಿಳಿಸಿದರು ...
Subscribe to:
Posts (Atom)












